ಮನೆ ಅಪರಾಧ ಅಸ್ಸಾಂ: 45 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶ

ಅಸ್ಸಾಂ: 45 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶ

0

ಅಸ್ಸಾಂ(Assam): ಬಿಎಸ್‌’ಎಫ್ ಮತ್ತು ಅಸ್ಸಾಂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕರೀಂಗಂಜ್ ಜಿಲ್ಲೆಯಲ್ಲಿ ₹45 ಕೋಟಿಗೂ ಅಧಿಕ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.

ಮಂಗಳವಾರ ಬೆಳಗಿನ ಜಾವ, ಕರೀಂನಗರದ ಹೊಸ ರೈಲು ನಿಲ್ದಾಣದ ಸಮೀಪ ಟ್ರಂಕ್‌’ನಲ್ಲಿದ್ದ ಹೆರಾಯಿನ್ ಅನ್ನು ವಶಕ್ಕೆ ಪಡೆಯಲಾಗಿದೆ. ಹೆರಾಯಿನ್ ಅನ್ನು ತ್ರಿಪುರಾದಿಂದ ಕರೀಂಗಂಜ್ ಮಾರ್ಗವಾಗಿ ಮಿಜೋರಾಂಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್ ಮತ್ತು ಕರೀಂಗಂಜ್ ಪೊಲೀಸರು, 764 ಸಾಬೂನು ಬಾಕ್ಸ್‌ಗಳಲ್ಲಿ ಹಾಕಿ, ಡ್ರೈವರ್ ಕ್ಯಾಬಿನ್‌ನ ಸೀಕ್ರೆಟ್ ಚೇಂಬರ್‌ನಲ್ಲಿ ಇಡಲಾಗಿದ್ದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.

ಹೆರಾಯಿನ್ ಸುಮಾರು 9.47 ಕೆ.ಜಿಗಳಷ್ಟಿದ್ದು, ₹ 47.4 ಕೋಟಿಯಷ್ಟು ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ.

ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿನ ಲೇಖನಬಿಸಿಸಿಐ ಅಧ್ಯಕ್ಷರಾಗಿ ಕರ್ನಾಟಕ ಮೂಲದ ರೋಜರ್ ಬಿನ್ನಿ ಆಯ್ಕೆಯಾಗುವ ಸಾಧ್ಯತೆ
ಮುಂದಿನ ಲೇಖನಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ‘ವೈಜ್ಞಾನಿಕ ತನಿಖೆʼ : ಅಕ್ಟೋಬರ್ 14 ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ