ಮನೆ ಅಪರಾಧ ಬೆಂಗಳೂರಿನಿಂದ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ: ಪ್ರಕರಣ ದಾಖಲು

ಬೆಂಗಳೂರಿನಿಂದ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ: ಪ್ರಕರಣ ದಾಖಲು

0

ಚಿಕ್ಕಮಗಳೂರು: ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದ ಬೆಂಗಳೂರು ರಾಜಗೋಪಾಲನಗರ ಪೊಲೀಸ್ ಠಾಣೆ ಪೊಲೀಸ್ ಪೇದೆ ಮೇಲೆ ದೇಗುಲದ ಮುಂಭಾಗದಲ್ಲೇ ಹಲ್ಲೆ ನಡೆಸಿರುವ ಘಟನೆ ಶೃಂಗೇರಿಯಲ್ಲಿ ನಡೆದಿದೆ.

Join Our Whatsapp Group

ಮೇ.26 ರಂದು ರಾತ್ರಿ 12.30ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಕಾರು ನಿಲ್ಲಿಸಿದ್ದಾಗ ಈ ಘಟನೆ ನಡೆದಿದ್ದು, ಪೇದೆ ರಾಜೇಗೌಡ, ಪತ್ನಿ ಕುಸುಮ ಹಾಗೂ ಅವರ ಅಣ್ಣ-ಅತ್ತಿಗೆಯ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಶೃಂಗೇರಿ ಪಟ್ಟಣದ ಸ್ಪರ್ಶಿತ್ ಎಂಬ ವ್ಯಕ್ತಿಯಿಂದ ಪೇದೆ ಮೇಲೆ ಹಲ್ಲೆ ನಡೆಸಿದ್ದು, ಶೃಂಗೇರಿ ಕಾರು ಪಾರ್ಕಿಂಗ್ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಪೊಲೀಸ್ ಪೇದೆ ರಾಜೇಗೌಡ ಮತ್ತು ಕುಟುಂಬ ಶೃಂಗೇರಿ ಶಾರದಾಂಬೆಯ ದರ್ಶನಕ್ಕೆ ಬಂದಿದ್ದರು. ಈ ವೇಳೆ ರಾತ್ರಿ 12.30ರ ಸುಮಾರಿಗೆ ಪೇದೆಯ ಅಣ್ಣ-ಅತ್ತಿಗೆ ಉಳಿಯಲು ಲಾಡ್ಜ್ ಕೇಳಲು ಹೋಗಿದ್ದರು. ಆಗ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ದೇವಾಲಯದ ಮುಂಭಾಗವಿದ್ದ ಮತ್ತಿಬ್ಬರು ಸೇರಿ ಗಲಾಟೆ ಮಾಡಿದ್ದು, ದೇವಸ್ಥಾನದ ಮುಂಭಾಗ ಇದ್ದ ಕಾರ್ ತೆಗೆಯುವಂತೆ ಗಲಾಟೆ ಮಾಡಿದ್ದಾರೆ.

ಈ ವೇಳೆ ಕಬ್ಬಿಣದ ರಾಡ್‌ನಿಂದ ಪೇದೆ ರಾಜೇಗೌಡ ಮೇಲೆ ಹಲ್ಲೆಗೆ ಯತ್ನಿಸಿದ್ದು, ಗಲಾಟೆ ಬಿಡಿಸಲು ಬಂದ ಪೇದೆ ಅಣ್ಣ ಉಮೇಶ್ ಮೇಲೂ ಹಲ್ಲೆ ನಡೆಸಿದ್ದಾರೆ. ಪೇದೆ ರಾಜೇಗೌಡ ಹಾಗೂ ಉಮೇಶ್ ಇಬ್ಬರ ಕೈಗೂ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಕೊಲೆ ಮಾಡುವುದಾಗಿ ಸ್ಪರ್ಶಿತ್ ಮತ್ತು ಸಹಚಚರು ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನವೀರ ಸಾವಾರ್ಕರ್ ಯುವ ಬಳಗದ ವತಿಯಿಂದ ಇಂದು ಸಾವರ್ಕರ್ ರವರ ೧೪೪ನೇ ಜಯಂತಿ
ಮುಂದಿನ ಲೇಖನಪೂರ್ವಾಗ್ರಹಗಳಿಂದ ಮುಕ್ತರಾಗದೆ ವಿಕಾಸವಿಲ್ಲ