ಮೈಸೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಸಂಬಂಧ ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ ದಿನದಂದು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಡುವ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೂ ಮತದಾನದ ಹಕ್ಕನ್ನು ಚಲಾಯಿಸುವ ದೃಷ್ಠಿಯಿಂದ ಅಂಚೆ ಮತಪತ್ರಗಳ ನಿರ್ವಹಣೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ವ ಪ್ರಯತ್ನಮಾಡಲಾಗಿದೆ.
ಅಂಚೆ ಮತ ಪತ್ರಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು, ಮೈಸೂರು ನಗರ, ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ, ಮೈಸೂರು ಕಮಾಂಡೆಂಟ್ 5 ಬೆಟಾಲಿಯನ್, ಕೆ.ಎಸ್.ಆರ್ ಪಿ, ಮೈಸೂರು ಮತ್ತು ಗೃಹರಕ್ಷಕದಳ ಮೈಸೂರು ಇವರುಗಳಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಿಗೆ ಅಂಚೆ ಮತದಾನ ಮಾಡಲು ಕಮಾಂಡೆಂಟೆ 5 ಬೆಟಾಲಿಯನ್, ಕೆ.ಎಸ್.ಆರ್ ಪಿ, ಮೈಸೂರು ಇವರ ಕಛೇರಿಯಲ್ಲಿ ಜಿಲ್ಲೆಯ ಎಲ್ಲಾ 11 ವಿಧಾನಾ ಸಭಾ ಕ್ಷೇತ್ರದ ರಿಟರ್‌ನಿಂಗ್ ಆಫೀಸರ್ ರವರ ಕಚೇರಿಯಿಂದ ದಿನಾಂಕ:04-5-2023 ರಂದು ಪೋಸ್ಟಲ್ ಬ್ಯಾಲೇಟಿಂಗ್ ಫೆಸಿಲಿಟೇಷನ್ ಸೆಂಟರ್ ತೆರೆದು ಬೆಳಿಗೆ ೯.೦೦ ಗಂಟೆಯಿಂದ ಸಂಜೆ ೫.೦೦ ಗಂಟೆಯವರೆಗೆ ಅಂಚೆ ಮೂಲಕ ಮತದಾನ ಮಾಡಲಾಗುತ್ತಿದೆ.
ಆದುದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಪೊಲೀಸ್ ಸಿಬ್ಬಂದಿಗಳು (ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಪಿಕ್ ಪೊಲೀಸ್ ಸಿಬ್ಬಂದಿಗಳನ್ನು ಹೊರತು ಪಡಿಸಿ) ಖಡ್ಡಾಯವಾಗಿ ಸಂಬಂಧಪಟ್ಟ ಸಿಬ್ಬಂದಿಗಳು ಚುನಾವಣಾ ಗುರುತಿನ ಚೀಟಿಯೊಂದಿಗೆ ಹಾಜರಾಗಿ ಮತದಾನ ಮಾಡುವಂತೆ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲು ಸಂಬಂಧಪಟ್ಟ ಪೊಲೀಸ್ ಆಯುಕ್ತರು, ಪೊಲೀಸ್ ಅಧೀಕ್ಷಕರು, ಕಾಮಾಂಡೆಂಟ್ 5 ನೇ ಪಡೆ ಮತ್ತು ಗೃಹರಕ್ಷಕ ದಳ ರವರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.