ಮನೆ ಆರೋಗ್ಯ ಜಾಗತಿಕವಾಗಿ ಕೋವಿಡ್‌ 19 ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ ಕಂಪನಿ

ಜಾಗತಿಕವಾಗಿ ಕೋವಿಡ್‌ 19 ಲಸಿಕೆ ಹಿಂಪಡೆಯುವುದಾಗಿ ಘೋಷಿಸಿದ ಆಸ್ಟ್ರಾಜೆನಿಕಾ ಕಂಪನಿ

0

ನವದೆಹಲಿ: ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತಿರುವ ಹಿನ್ನೆಲೆ ಹಾಗೂ ಜಾಗತಿಕವಾಗಿ ಬೇಡಿಕೆ ಕುಸಿದ ನಿಟ್ಟಿನಲ್ಲಿ ಕೋವಿಡ್‌ 19 ಲಸಿಕೆಯನ್ನು ಜಾಗತಿಕವಾಗಿ ಹಿಂಪಡೆಯುವುದಾಗಿ ಆಸ್ಟ್ರಾಜೆನಿಕಾ ಕಂಪನಿ ತಿಳಿಸಿದೆ.

Join Our Whatsapp Group

ಆಸ್ಟ್ರಾಜೆನಿಕಾ ಮತ್ತು ಆಕ್ಸ್‌ ಫರ್ಡ್‌ ಯೂನಿರ್ವಸಿಟಿ ಜಂಟಿಯಾಗಿ ಈ ಕೋವಿಡ್‌ 19 ಲಸಿಕೆಯನ್ನು ತಯಾರಿಸಿತ್ತು. ಭಾರತದಲ್ಲಿ ಸೇರಂ ಸಂಸ್ಥೆ ಕೋವಿಶೀಲ್ಡ್‌ ಅನ್ನು ತಯಾರಿಸಿತ್ತು. ಆದರೆ ಈ ಲಸಿಕೆಯಿಂದ ಕೆಲವೊಂದು ಅಡ್ಡ ಪರಿಣಾಮ ಬೀರುತ್ತಿದೆ ಎಂಬುದನ್ನು ಆಸ್ಟ್ರಜೆನಿಕಾ ಒಪ್ಪಿಕೊಂಡಿತ್ತು. ಆದರೆ ಇದೀಗ ಲಸಿಕೆ ಹಿಂಪಡೆಯುತ್ತಿರುವುದು ಅಡ್ಡಪರಿಣಾಮ ಕಾರಣಕ್ಕಾಗಿ ಅಲ್ಲ, ಇದೊಂದು ಕಾಕತಾಳೀಯ ವಿಷಯವಾಗಿದೆ ಎಂದು ಆಸ್ಟ್ರಾಜೆನಿಕಾ ತಿಳಿಸಿದೆ.

ವಾಣಿಜ್ಯ ಕಾರಣಗಳಿಂದಾಗಿ ಕೋವಿಡ್‌ 19 ಲಸಿಕೆ ಕೋವಿಶೀಲ್ಡ್‌ ಅನ್ನು ಜಾಗತಿಕವಾಗಿ ಹಿಂಪಡೆಯುತ್ತಿರುವುದಾಗಿ ಲಸಿಕೆ ತಯಾರಿಕೆ ಕಂಪನಿ ಆಸ್ಟ್ರಾಜೆನಿಕಾ ತಿಳಿಸಿರುವುದಾಗಿ ದ ಟೆಲಿಗ್ರಾಫ್‌ ವರದಿ ಮಾಡಿದೆ.

ಕಂಪನಿ ಇನ್ನು ಕೋವಿಡ್‌ 19 ಲಸಿಕೆಯನ್ನು ಉತ್ಪಾದಿಸುವುದಿಲ್ಲ ಎಂದು ತಿಳಿಸಿದ್ದು, ಅದೇ ರೀತಿ ವಿಶ್ವಾದ್ಯಂತ ಲಸಿಕೆಯನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದೆ. ಕೋವಿಶೀಲ್ಡ್‌ ಲಸಿಕೆಯಿಂದ ಸಾವಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿ ಬ್ರಿಟನ್‌ ನಲ್ಲಿ ಆಸ್ಟ್ರಾಜೆನಿಕಾ ವಿರುದ್ಧ 100 ಮಿಲಿಯನ್‌ ಪೌಂಡ್‌ ಮೊಕದ್ದಮೆ ಹೂಡಲಾಗಿದೆ.

ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಕೋವಿಶೀಲ್ಡ್‌ ಲಸಿಕೆಯಿಂದ ಕೆಲವೊಂದು ಅಡ್ಡ ಪರಿಣಾಮ ಬೀರುತ್ತಿದೆ ಎಂದು ಆಸ್ಟ್ರಾಜೆನಿಕಾ ಕಂಪನಿ ಕೋರ್ಟ್‌ ನಲ್ಲಿ ಒಪ್ಪಿಕೊಂಡಿರುವುದಾಗಿ ವರದಿ ವಿವರಿಸಿದೆ.