ಮನೆ ಅಪರಾಧ ಕೋಲ್ಕತ್ತಾ: ಖಾಲಿ ಕ್ವಾರ್ಟರ್ಸ್ ​ನಲ್ಲಿ ಮಹಿಳೆಯ ದೇಹದ ಭಾಗಗಳು 3 ಪ್ಲಾಸ್ಟಿಕ್​ ಚೀಲಗಳಲ್ಲಿ ಪತ್ತೆ

ಕೋಲ್ಕತ್ತಾ: ಖಾಲಿ ಕ್ವಾರ್ಟರ್ಸ್ ​ನಲ್ಲಿ ಮಹಿಳೆಯ ದೇಹದ ಭಾಗಗಳು 3 ಪ್ಲಾಸ್ಟಿಕ್​ ಚೀಲಗಳಲ್ಲಿ ಪತ್ತೆ

0

ಕೋಲ್ಕತ್ತಾ:  ವಾಟ್ ​ಗಂಜ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿರುವ ಸಿಐಎಸ್​ ಎಫ್​ ಖಾಲಿ ಕ್ವಾರ್ಟರ್ಸ್​ ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.

Join Our Whatsapp Group

ಪೊಲೀಸ್ ತಂಡವು ಸ್ಥಳಕ್ಕೆ ತಲುಪಿದ ಬಳಿಕ ಮೂರು ಕಪ್ಪು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಲಾಗಿದ್ದ ಮಹಿಳೆಯ ಕತ್ತರಿಸಿದ ದೇಹದ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಿಳೆಯನ್ನು ಆ ರೀತಿ ಭಯಾನಕವಾಗಿ ಹತ್ಯೆ ಮಾಡಿರುವ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಮಹಿಳೆ 30-35 ವರ್ಷ ಆಸುಪಾಸಿನವರು ಎನ್ನಲಾಗಿದೆ, ಮಂಗಳವಾರ ತಡರಾತ್ರಿವರೆಗೂ ಪೊಲೀಸರು ಆಕೆಯ ಗುರುತು ಪತ್ತೆ ಹೆಚ್ಚುವ ಪ್ರಯತ್ನ ಮಾಡಿದ್ದಾರೆ ಆದರೆ ಇದುವರೆಗೂ ತಿಳಿದುಬಂದಿಲ್ಲ. ಆಕೆಯನ್ನು ಅದೇ ಪ್ರದೇಶದಲ್ಲಿ ಕೊಲೆ ಮಾಡಲಾಗಿದೆಯೇ ಅಥವಾ ಬೇರೆಡೆಗೆ ಕೊಲೆ ಮಾಡಿ ಅಲ್ಲಿ ತಂದು ಎಸೆಯಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

ಆಕೆಯ ಹಣೆ ಮೇಲೆ ಸಿಂಧೂರವಿದ್ದ ಕಾರಣ ಮದುವೆಯಾಗಿರಬಹುದು ಎಂದು ಅಂದಾಜಿಸಿದ್ದಾರೆ. ಚೀಲದೊಳಗೆ ಇಟ್ಟಿಗೆಯೂ ಇತ್ತು, ಕೈಗಳು, ಪಾದ ಹಾಗೂ ಹೊಟ್ಟೆಯ ಭಾಗ ಇನ್ನೂ ಪತ್ತೆಯಾಗಿಲ್ಲ. ಚಲಿಸುವ ವಾಹನದಿಂದ ಯಾರೋ ಈ ಚೀಲಗಳನ್ನು ಎಸೆದಿರಬಹುದು ಎಂದು ಅಂದಾಜಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ. ಫೆಬ್ರವರಿಯಲ್ಲಿ ಬೆಂಗಳೂರಿನ ಕೆಆರ್ ಪುರಂ ಪ್ರದೇಶದಲ್ಲಿ 65 ವರ್ಷದ ಮಹಿಳೆಯ ಛಿದ್ರಗೊಂಡ ಶವ ಡ್ರಮ್‌ನಲ್ಲಿ ಪತ್ತೆಯಾಗಿತ್ತು.

ಮೃತರನ್ನು  ಸುಶೀಲಮ್ಮ ಎಂದು ಗುರುತಿಸಲಾಗಿದೆ ಮತ್ತು ಅವರ ಮಗಳು ಕೆಆರ್ ಪುರಂನ ನೆರೆಯ ಪ್ರದೇಶವಾದ ನಿಸರ್ಗ ಲೇಔಟ್‌ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಸ್ಥಳದಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ ಬಳಿಕ ಪೊಲೀಸರು ಶವ ಪತ್ತೆ ಮಾಡಿದ್ದರು.

ಹಿಂದಿನ ಲೇಖನಶಾಸನಗಳನ್ನು ಮುದ್ರಿಸುವಾಗ ಎಚ್ಚರ ಅಗತ್ಯ: ಕಾನೂನು ಪುಸ್ತಕ ಪ್ರಕಾಶಕರಿಗೆ ಹೈಕೋರ್ಟ್‌ ಎಚ್ಚರಿಕೆ
ಮುಂದಿನ ಲೇಖನಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಮಾಡಿದ ಅಭಿವೃದ್ಧಿ ಕಾರ್ಯದ ಶ್ವೇತ ಪತ್ರ ಹೊರಡಿಸಿ: ಸಿಎಂಗೆ ಜಿಟಿಡಿ ಸವಾಲು