ಪ್ರಾರ್ಥನೆಗೆಂದು ಪ್ರತಿದಿನವೂ ನಿಯಮಿತವಾಗಿ ಏಳುತ್ತಿದ್ದ, ಪೂರ್ವದೇಶದ ಒಬ್ಬ ಸುಲ್ತಾನನ ಕಥೆಯಿದು. ಒಮ್ಮೆ ಸುಲ್ತಾನನ ಸಮಯಕ್ಕೆ ಸರಿಯಾಗಿ ಪ್ರಾರ್ಥನೆಗೆ ಏಳಲು ವಿಫಲನಾದನು.
ಆಗ ಸೈತಾನ ಅವನನ್ನು ಎಬ್ಬಿಸಿ ಪ್ರಾರ್ಥನೆಗೆ ಸಿಧ್ಧನಾಗು ಎಂದಿತು. “ನೀನು ಯಾರು?” ಎಂದು ಸುಲ್ತಾನ ಕೇಳಿದನು. “ನಿನಗಾಗಿ ಒಳ್ಳೆಯ ಕೆಲಸಗಳನ್ನು ಮಾಡುವವರೆಗೆ ನಾನು ಯಾರೆಂದು ಯೋಚಿಸಬೇಡ” ಎಂದು ಸೈತಾನ ಹೇಳಿತು. ಇದನ್ನು ಕೇಳಿದ ಸುಲ್ತಾನ “ನಾನು ಎದ್ದು ಪ್ರಾರ್ಥನೆ ಮಾಡಬೇಕೆಂದು, ನೀನೇಕೆ ಬಯಸುತ್ತೀರುವೆ ಹೇಳು?” ಎಂದು ಪ್ರಶ್ನಿಸಿದನು. “ಆಯಿತು, ಕೇಳು?” ಎಂದು ಸೈತಾನ ಹೇಳಿತು.
ಪ್ರಶ್ನೆಗಳು :-
- ಸುಲ್ತಾನನಿಗೆ ಸೈತಾನ ಏನು ಹೇಳಿತು?
ಉತ್ತರಗಳು:- “ನೀನು ನಿನ್ನ ಪ್ರಾರ್ಥನೆಯನ್ನು ಮರೆತು ಮಲಗಿದರೆ ಆನಂತರ ನಿನಗೆ ಬಹಳ ಬೇಸರವಾಗುತ್ತಿತ್ತು. ಇಂತಹ ಪಶ್ಚಾತಾಪವು ದೇವನಿಗೆ ಮೆಚ್ಚುಗೆಯಾಗುತ್ತದೆ. ಆದರೆ ನೀನು ಈಗಿನಂತೆ ಮುಂದುವರೆದರೆ ಹತ್ತು ವರ್ಷಗಳ ಕಾಲ ಒಮ್ಮೆಯೂ ಪ್ರಾರ್ಥನೆಯನ್ನು ಮರೆಯದಿದ್ದರೆ, ನಿನಗೆ ಎಷ್ಟು ತೃಪ್ತಿಯಾಗುತ್ತದೆಂದರೆ ನೀನು ಹೆಮ್ಮೆಯ ದೊಡ್ಡ ಪಾಶಕ್ಕೆ ಬಲಿಯಾಗಿ ನಾನು ಹೆಚ್ಚು ಮೆಚ್ಚುವನಾಗುವೆ” ಎಂದು ಸೈತಾನ ಹೇಳಿತು. - ಈ ಕಥೆಯ ನೀತಿಯೇನು ?
ಉತ್ತರಗಳು :- ತಪ್ಪು ಕೆಲಸ ಮಾಡಿ ಪಡುವ ಪಶ್ಚಾತಾಪವು ಹೆಮ್ಮೆಯೊಂದಿಗೂಡಿರುವ ಸುಗುಣಕ್ಕಿಂತ ಉತ್ತಮ.