ಮನೆ ರಾಜ್ಯ ಬಿಜೆಪಿ ಭಾನುಪ್ರಕಾಶ್ ಪುತ್ರನಿದ್ದ ಕಾರಿನ ಮೇಲೆ ದಾಳಿ

ಬಿಜೆಪಿ ಭಾನುಪ್ರಕಾಶ್ ಪುತ್ರನಿದ್ದ ಕಾರಿನ ಮೇಲೆ ದಾಳಿ

0

ಶಿವಮೊಗ್ಗ (Shimoga) – ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಂಬಿ ಭಾನುಪ್ರಕಾಶ್ ಅವರ ಪುತ್ರ ಹರಿಕೃಷ್ಣ ಅವರಿದ್ದ ಕಾರಿನ ಮೇಲೆ ಕಿಡಿಗೇಡಿಗಳು ರಾಡ್‍ನಿಂದ ದಾಳಿ ಮಾಡಿರುವ ಘಟನೆ ನಡೆದಿದೆ.

ಸೂಳೆಬೈಲು ಸಮೀಪದ ಇಂದಿರಾನಗರದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಶಿವಮೊಗ್ಗದಿಂದ ಮತ್ತೂರಿಗೆ ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಮೂರ್ನಾಲ್ಕು ಮಂದಿ ಕಿಡಿಗೇಡಿಗಳು ಏಕಾಏಕಿ ಕಾರಿನ ಹಿಂಭಾಗಕ್ಕೆ ರಾಡ್‍ನಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ. ಕತ್ತಲಾಗಿದ್ದರಿಂದ ದಾಳಿ ಮಾಡಿದವರ್ಯಾರು ಎಂದು ಗೊತ್ತಾಗಿಲ್ಲ.

ಸ್ಥಳದಲ್ಲಿ ಸಂದಿಗ್ಧ ಸ್ಥಿತಿ, ಎಸ್‍ಪಿ ದೌಡು: 

ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮತ್ತೂರು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದರಿಂದಾಗಿ ಕೆಲಹೊತ್ತು ಸಂದಿಗ್ಧ ಸ್ಥಿತಿ ನಿರ್ಮಾಣವಾಗಿತ್ತು. ಎಸ್‍ಪಿ ಬಿ.ಎಂ. ಲಕ್ಷ್ಮೀಪ್ರಸಾದ್ ಸೇರಿದಂತೆ ತುಂಗಾನಗರ, ದೊಡ್ಡಪೇಟೆ ಸೇರಿದಂತೆ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದರು. ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುವೆ: ಹೆಚ್.ಡಿ.ಕುಮಾರಸ್ವಾಮಿ
ಮುಂದಿನ ಲೇಖನಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಹೆಚ್ಡಿಕೆ