ಮನೆ Uncategorized ಭಜದ ಮರಗಟ್ಟುವಿಕೆಗೆ ಮಾಡಬೇಕಾದ ಯೋಗಾಸನಗಳು

ಭಜದ ಮರಗಟ್ಟುವಿಕೆಗೆ ಮಾಡಬೇಕಾದ ಯೋಗಾಸನಗಳು

0

ಭುಜದ ಮರಗಟ್ಟುವಿಕೆಗೆ ಯೋಗಾಸನ ಮಾಡಿ ಅದನ್ನು ನಿಯಂತ್ರಿಸಬಹುದು. ಯಾವೆಲ್ಲ ಆಸನಗಳಿಂದ ಭುಜದ ಮರಗಟ್ಟುವಿಕೆಯನ್ನು ತಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ.

ಭುಜಂಗಾಸನ

ಬೆನ್ನು, ಕುತ್ತಿಗೆ ನೋವಿಗೆ ಆರಾಮದಾಯಕ ಅನುಭವ ನೀಡುವ ಭುಜಂಗಾಸನ, ಭುಜದ ಮರಗಟ್ಟುವಿಕೆಗೂ ಉತ್ತಮವಾಗಿದೆ.

ಈ ಆಸನವು ಬೆನ್ನಿನ ಸ್ನಾಯುಗಳ ನಮ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಕುತ್ತಿಗೆ ಮತ್ತು ಭುಜಗಳಿಂದ ಒತ್ತಡವನ್ನು ನಿವಾರಿಸಲು ಇದು ಒಳ್ಳೆಯದು. ಭುಜಂಗಾಸನದ ನಿಯಮಿತ ಅಭ್ಯಾಸದಿಂದ ಭುಜದ ನೋವನ್ನೂ ಕಡಿಮೆ ಮಾಡಬಹುದಾಗಿದೆ.

​ಹಿಮ್ಮುಖ ನಮಸ್ಕಾರದ ತಾಡಾಸನ

ಹೆಪ್ಪುಗಟ್ಟಿದ ಭುಜಕ್ಕೆ ತಾಡಾಸನವು ಅತ್ಯಂತ ಪ್ರಯೋಜನಕಾರಿಯಾಗಿದೆ. ಕೈಗಳನ್ನು ಹಿಮ್ಮುಖವಾಗಿ ಇರಿಸಿ ನಮಸ್ಕಾರ ಮಾಡುವುದರಿಂದ ಭುಜಗಳಿಗೆ ವ್ಯಾಯಾಮ ಸಿಗುತ್ತದೆ. ಅದೇ ರೀತಿ ಹೊಟ್ಟೆ, ಬೆನ್ನಿಗೆ ಆರಾಮದಾಯಕ ಅನುಭವ ನೀಡುತ್ತದೆ. ಹಿಮ್ಮುಖ ತಾಡಾಸನದ ನಿಯಮಿತ ಅಭ್ಯಾಸದಿಂದ ಭುಜದ ಮರಗಟ್ಟುವಿಕೆಯನ್ನು ನಿಯಂತ್ರಿಸಬಹುದಾಗಿದೆ.

​ಗರುಡಾಸನ

ಕೈಗಳನ್ನು ಇಂಟರ್ಲಾಕ್‌ ಮಾಡಿ ಒಂಟಿ ಕಾಲಿನಲ್ಲಿ ನಿಂತು ಮಾಡುವ ಆಸನ ಗರುಡಾಸನ. ಗರುಡಾಸನವು ಭುಜದ ಮರಗಟ್ಟುವಿಕೆಯನ್ನು ನಿಯಂತ್ರಿಸಲು ಅತ್ಯುತ್ತಮ ಆಸನವಾಗಿದೆ.

ಪ್ರತಿನಿತ್ಯ ಗರುಡಾಸನ ಮಾಡುವುದರಿಂದ ಭುಜಗಳು ಮತ್ತು ಬೆನ್ನಿನ ಮೇಲ್ಭಾಗವನ್ನು ವಿಸ್ತರಿಸುತ್ತದೆ. ಇದು ಭುಜಗಳನ್ನು ಸಡಿಲಗೊಳಿಸಲು ಒತ್ತಡವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಭುಜಕ್ಕೂ ಆರಾಮದಾಯಕ ಅನುಭವ ಸಿಗುವ ಮೂಲಕ ಮರಗಟ್ಟಿದ ಭುಜ ಸಡಿಲಗೊಳ್ಳುತ್ತದೆ.

ಧನುರಾಸನ

ಧನುರಾಸನವು ಬೆನ್ನಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಎದೆ, ಕುತ್ತಿಗೆ ಮತ್ತು ಭುಜಗಳನ್ನು ಸಡಿಲಗೊಳಿಸುತ್ತದೆ . ಈ ಆಸನವು ದೇಹದ ಮುಂಭಾಗ ಮತ್ತು ಹಿಂಭಾಗವನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ, ಹೀಗಾಗಿ ಹಠಾತ್ ಸ್ನಾಯುವಿನ ಒತ್ತಡವನ್ನು ತಪ್ಪಿಸುತ್ತದೆ.

ಈ ಮೂಲಕ ಭುಜದಲ್ಲಿ ಹಿಡಿದುಕೊಳ್ಳುವಂತಹ ಅನುಭವ ನಿವಾರಣೆಯಾಗುತ್ತದೆ. ಮರಗಟ್ಟುವಿಕೆಯಂತಹ ಹಿಂಸೆಯಿಂದ ದೂರವುಳಿಯಬಹುದಾಗಿದೆ.

ಶವಾಸನ

ಇಡೀ ದೇಹಕ್ಕೆ ವಿಶ್ರಾಂತಿ ನೀಡುವ ಆಸನ ಶವಾಸನ. ಮರಗಟ್ಟಿದ ಭುಜದ ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ. ಶವಾಸನ ಮಾಡುವಾಗ ಬೆನ್ನಿನ ಮೇಲೆ ನೆಲದ ಮೇಲೆ ಮಲಗಿಕೊಳ್ಳಿ. ಕಾಲುಗಳನ್ನು ನೆಲದ ಮೇಲೆ ನೇರವಾಗಿ ಇರಿಸಿ, ನಿಮ್ಮ ಪಾದಗಳನ್ನು ದೂರವಿರಿಸಿ. ದೇಹದಿಂದ ಸುಮಾರು ಆರು ಇಂಚುಗಳಷ್ಟು ದೂರದಲ್ಲಿರುವ ಕೈಗಳನ್ನು ನಿಮ್ಮ ಬದಿಗಳಿಂದ ನೇರವಾಗಿ ಇರಿಸಿ. ತಲೆ ಮತ್ತು ಬೆನ್ನುಮೂಳೆಯು ನೇರ ರೇಖೆಯಲ್ಲಿರಬೇಕು.

ನಿಧಾನವಾಗಿ, ನಿಮ್ಮ ಕಣ್ಣುಗಳನ್ನು ಮುಚ್ಚಿ, ದೇಹದ ಎಲ್ಲಾ ಭಾಗಗಳನ್ನು ಸಡಿಲಗೊಳಿಸಿ. ನಿಮ್ಮ ಉಸಿರಾಟವನ್ನು ಗಮನಿಸಿ. ಇದರಿಂದ ಭುಜ ಮಾತ್ರವಲ್ಲ ದೇಹದ ಎಲ್ಲಾ ಭಾಗಗಳಿಗೆ ವಿಶ್ರಾಂತಿ ಸಿಕ್ಕಿ ಮರಗಟ್ಟಿದ ಭುಜ ಆರಾಮವಾಗುತ್ತದೆ.

ಹಿಂದಿನ ಲೇಖನಪೆಟ್ರೋನಾಸ್ ಹೈಡ್ರೋಜನ್, ಕಾಂಟಿನೆಂಟಲ್‌ ಇಂಡಿಯಾ ಸಂಸ್ಥೆಗಳಿಂದ ರಾಜ್ಯದಲ್ಲಿ 32,200 ಕೋಟಿ ರೂ. ಹೂಡಿಕೆ 
ಮುಂದಿನ ಲೇಖನವಿಘ್ನ ನಿವಾರಕ ಗಣೇಶನ ಸ್ತೋತ್ರ