ಕೊಳ್ಳೇಗಾಲ: ಪಟ್ಟಣದ ಮುಡಿಗುಂಡ ಬಡಾವಣೆಯಲ್ಲಿ ಹಳೆಯ ವೈಷಮ್ಯದಿಂದ ಜಗಳ ನಡೆದ ಸಂದರ್ಭದಲ್ಲಿ ಹಲ್ಲೆಯಿಂದ ಆಟೋ ಚಾಲಕ ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಬಡಾವಣೆಯ ಆಟೋ ಚಾಲಕ ಮಹದೇವಸ್ವಾಮಿ (42) ಮೃತ ದುರ್ದೈವಿ.
ಘಟನೆ ವಿವರ: ಬಡಾವಣೆ ಅಕ್ಕ ಪಕ್ಕದ ಮನೆಯಲ್ಲಾಗಿದ್ದು ಮಹದೇವಸ್ವಾಮಿ ಆಟೋವನ್ನು ಮನೆಯ ಮುಂದೆ ನಿಲ್ಲಿಸುತ್ತಿದ್ದ ವಿಷಯಕ್ಕೆ ಸೋಮವಾರ ರಾತ್ರಿ ಜಗಳ ಆರಂಭವಾಗಿ, ಪಕ್ಕದ ಮನೆಯ ನಿವಾಸಿ ಚಂದ್ರಮ್ಮ (50) ಮತ್ತು ಪ್ರೀತಿ(35) ಇಟ್ಟಿಗೆಯಿಂದ ಮಹದೇವಸ್ವಾಮಿಗೆ ಹೊಡೆದಾಗ ಆತ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾನೆ.
ಆರನಿಗೆ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯದಲ್ಲಿ ಮೃತ ಪಟ್ಟನೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿರುವ ನಗರ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ಘಟನೆಗೆ ಸಂಬಂಧಿಸಿದಂತೆ ಚಂದ್ರಮ್ಮ (50) ಮತ್ತು ಪ್ರೀತಿ(35) ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.














