ಮನೆ ರಾಷ್ಟ್ರೀಯ ಅಹಮದಾಬಾದ್’​ನಲ್ಲಿ  ನಡೆದ ಹೀರಾಬೆನ್ ಅವರ ಅಂತ್ಯಸಂಸ್ಕಾರ

ಅಹಮದಾಬಾದ್’​ನಲ್ಲಿ  ನಡೆದ ಹೀರಾಬೆನ್ ಅವರ ಅಂತ್ಯಸಂಸ್ಕಾರ

0

ಅಹಮದಾಬಾದ್(ಗುಜರಾತ್​): ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಮೋದಿ ಅವರ ಅಂತ್ಯ ಸಂಸ್ಕಾರ ಅಹಮದಾಬಾದ್’​ನಲ್ಲಿ ನಡೆಯಿತು.

ನರೇಂದ್ರ ಮೋದಿ ಮತ್ತು ಅವರ ಹಿರಿಯ ಸಹೋದರ ಸೋಮಾಭಾಯಿ ಅವರು ಹೀರಾಬೆನ್ ಅವರ ಪಾರ್ಥಿವ ಶರೀರಕ್ಕೆ ‘ಅಗ್ನಿ ಸ್ಪರ್ಶ ‘ ನೀಡಿದರು.

ದೆಹಲಿಯಿಂದ ಮುಂಜಾನೆ ವಿಮಾನದಲ್ಲಿ ಬಂದ ಪ್ರಧಾನಿಯವರು ತಮ್ಮ ತಾಯಿಗೆ ಪುಷ್ಪ ನಮನ ಸಲ್ಲಿಸಿದರು. ತಾಯಿಯ ಅಂತಿಮ ಯಾತ್ರೆ ವೇಳೆ, ಅವರ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟರು. ಆ ಬಳಿಕ ಅಹಮದಾಬಾದ್​​’ನ ಶವಾಗಾರದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಯಿತು.

ಎಲ್ಲ ಸಹೋದರರ ಜತೆಗೂಡಿ ತಾಯಿ ಹೀರಾಬೆನ್​ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಹಿಂದು ಸನಾತನ ಪದ್ಧತಿಯಂತೆ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲಾಯಿತು.

ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ಅವರು ಸ್ಮಶಾನದಲ್ಲಿ ಪ್ರಧಾನಮಂತ್ರಿಯವರೊಂದಿಗೆ ಖುದ್ದು ಸಂತಾಪ ಸೂಚಿಸಿದರು.

ಹಿಂದಿನ ಲೇಖನನಕಲಿ ವೈದ್ಯರಿಗೆ ಸಿಬಿಐ ಶಾಕ್: ಏಕಕಾಲಕ್ಕೆ 91 ಸ್ಥಳಗಳಲ್ಲಿ ದಾಳಿ
ಮುಂದಿನ ಲೇಖನಬೆಸ್ಕಾಂ, ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ದರ ಕಡಿತ: ಸುನೀಲ್ ಕುಮಾರ್