ಮನೆ ಅಪರಾಧ ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ವಂಚನೆಗೆ ಯತ್ನ: ಮೂವರ ಸೆರೆ, 69.79...

ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ವಂಚನೆಗೆ ಯತ್ನ: ಮೂವರ ಸೆರೆ, 69.79 ಲಕ್ಷ ವಶ

0

ಬೆಂಗಳೂರು: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ನಕಲಿ ತಾಮ್ರದ ಪಾತ್ರೆ ತೋರಿಸಿ ಉದ್ಯಮಿಗೆ 69.79 ಲಕ್ಷ ರೂ. ಟೋಪಿ ಹಾಕಲು ಯತ್ನಿಸಿದ್ದ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಪಂಜಾಬ್‌ ಮೂಲದ ಸನ್ನಿಗಿಲ್‌, ತಮಿಳು ನಾಡಿನ ಅಬ್ದುಲ್‌, ಬೆಂಗಳೂರಿನ ನಿವಾಸಿ ಶಿವಶಂಕರ್‌ ಬಂಧಿತರು.

ಬಂಧಿತರಿಂದ 69.79 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬೆಂಗ ಳೂರಿನ ಉದ್ಯಮಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು ತಮ್ಮ ಬಳಿ ಅದೃಷ್ಟ ಖುಲಾ ಯಿಸುವ ಚಮತ್ಕಾರಿ ಪಾತ್ರೆ ಇದೆ. ಅದನ್ನು ಮನೆ ಯಲ್ಲಿ ಇಟ್ಟರೆ ನಿಮ್ಮ ಅದೃಷ್ಟವೇ ಬದ ಲಾಗುತ್ತದೆ. ಇದಕ್ಕೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ನಂಬಿಸಿದ್ದರು.

ಒಂದೂವರೆ ಕೋಟಿ ರೂ. ಕೊಟ್ಟರೆ ಈ ಅದೃಷ್ಟದ ಪಾತ್ರೆ ಕೊಡುವುದಾಗಿ ನಂಬಿಸಿದ್ದರು. ಕೊನೆಗೆ 69.79 ಲಕ್ಷ ರೂ.ಗೆ ಡೀಲ್‌ ಕುದುರಿಸಿ ದ್ದರು. ಉದ್ಯಮಿ ಮೊಬೈಲ್‌ಗೆ ರೈಸ್‌ ಪುಲ್ಲಿಂಗ್‌ ಪಾತ್ರೆ ಎಂದು ನಕಲಿ ತಾಮ್ರದ ಪಾತ್ರೆಯ ವಿಡಿಯೋ ಕಳುಹಿಸಿದ್ದರು. ಆರೋಪಿಗಳು ಕೆಲ ದಿನಗಳ ಹಿಂದೆ ಜಯನಗರ 6ನೇ ಬ್ಲಾಕ್‌ ಯಡಿ ಯೂರು ಕೆರೆ ಬಳಿ ಪಾತ್ರೆಯ ಮಾರಾಟದ ವ್ಯವಹಾರವನ್ನು ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು.

ಈ ಮಾಹಿತಿಯನ್ನು ಆಧರಿಸಿ ಪೊಲೀಸರು ಸ್ಥಳಕ್ಕೆ ಹೋಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆಗೆ ಒಳಪಡಿಸಿ ರೈಸ್‌ ಪುಲ್ಲಿಂಗ್‌ ಸಂಬಂಧಿಸಿದಂತೆ ಹಳೆ ಯ ತಾಮ್ರದ ಪಾತ್ರೆ ಹಾಗೂ ನಗದು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಿ 5 ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆಯಲಾಗಿದ್ದು, ಬೇರೆ ಯಾರಿಗಾದರೂ ಇದೇ ಮಾದರಿಯಲ್ಲಿ ವಂಚಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.