ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಬಿ.ಆರ್. ಹಿಲ್ಸ್ ವಲಯದ ಆವರಾಣಿ ಗುಡ್ಡದ ಆಸುಪಾಸಿನಲ್ಲಿ ಪ್ರಾಣಿಗಳನ್ನ ಬೇಟೆಯಾಡಲು ಯೋಚಿಸಿದ 6 ಜನರಲ್ಲಿ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರಾದ 2 ನಾಡ ಬಂದೂಕು, 2 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದ್ದು, ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರು ಪರಾರಿಯಾಗಿದ್ದಾರೆ. ಅ. 23ರಂದು 6 ಜನರು ಆವರಾಣಿ ಗುಡ್ಡದ ಸುತ್ತಮುತ್ತ ಕಾಡುಪ್ರಾಣಿಗಳನ್ನ ಬೇಟೆಯಾಡಲು ಹೊಂಚು ಹಾಕಿದ್ದರು.
ಈ ವಿಷಯ ತಿಳಿದ ಯಳಂದೂರು ವಲಯಾರಣ್ಯಾಧಿಕಾರಿ ಎಸ್.ಎನ್.ನಾಗೇಂದ್ರ ನಾಯಕ, ಉಪವಲಯ ಅರಣ್ಯಾಧಿಕಾರಿಗಳಾದ ಪುನೀತ್ ಕುಮಾರ್ ಎಂ. ವರುಣ ಅವರು ಅರಣ್ಯ ಇಲಾಖೆ ಸಿಬ್ಬಂದಿ ಜೊತೆ ಕಾರ್ಯಾಚರಣೆ ನಡೆಸಿದರು.
ಈ ಸಂಬಂದ ಪ್ರಕರಣ ದಾಖಲಿಸುವ ಅರಣ್ಯ ಅಧಿಕಾರಿಗಳು ತಲೆಮರಿಸಿಕೊಂಡಿರುವ ಇಬ್ಬರ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.