ಮನೆ ಮನರಂಜನೆ ಅಜಿತ್ ಕುಮಾರ್ ನಟನೆಯ ವಲಿಮೈ ಫೆ.24 ರಂದು ತೆರೆಗೆ

ಅಜಿತ್ ಕುಮಾರ್ ನಟನೆಯ ವಲಿಮೈ ಫೆ.24 ರಂದು ತೆರೆಗೆ

0

ತಮಿಳು ನಟ ಅಜಿತ್‌ ಕುಮಾರ್ ಅಭಿನಯದ ’ವಲಿಮೈ’ ಚಿತ್ರ ಫೆಬ್ರುವರಿ 24ರಂದು ತೆರೆ ಕಾಣಲಿದೆ.

ಖಡಕ್‌ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಅಜಿತ್‌ ನಟಿಸಿದ್ದು, ಈಗಾಗಲೇ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಚಿತ್ರತಂಡ ವಲಿಮೈ ಸಿನಿಮಾದ ಕಿರು ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಅಜಿತ್​ ಮಾಡಿರುವ ಬೈಕ್​ ಸ್ಟಂಟ್ಸ್ ಮೈ ನವಿರೇಳಿಸುವಂತಿದೆ. ಅವರು ಕೆಲವು ಬೈಕ್ ಸ್ಟಂಟ್​ಗಳನ್ನು ಡೂಪ್​ ಬಳಸದೇ ಮಾಡಿರುವುದು ವಿಶೇಷ.

ಈ ವಿಡಿಯೊ ಕೇವಲ ಒಂದೇ ಗಂಟೆಯಲ್ಲಿ 30 ಸಾವಿರ ಲೈಕ್ಸ್​ ಪಡೆದಿದ್ದು, ಲಕ್ಷಾಂತರ ಸಲ ವೀಕ್ಷಣೆ ಕಂಡಿರುವುದು ದಾಖಲೆಯಾಗಿದೆ.

ಝೀ ಸ್ಟುಡಿಯೋಸ್ ಮತ್ತು ಬೋನಿ ಕಪೂರ್ ಅವರು ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಎಚ್. ವಿನೋತ್‌ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ವಲಿಮೈನಲ್ಲಿ ನಾಯಕಿಯಾಗಿ ಹುಮಾ ಖುರೇಶಿ ನಟಿಸಿದ್ದಾರೆ. ತೆಲುಗು ನಟ ಕಾರ್ತಿಕೇಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು, ಸುಮಿತ್ರಾ ಸೇರಿದಂತೆ ಹಲವರು ತಾರಾಬಳಗದಲ್ಲಿ ಇದ್ದಾರೆ.

ಹಿಂದಿನ ಲೇಖನ60 ವರ್ಷದ ದಿನಗೂಲಿ ಕಾರ್ಮಿಕ ಈಗ ಫೇಮಸ್‌ ಮಾಡೆಲ್‌
ಮುಂದಿನ ಲೇಖನಯುದ್ದದ ಕಾರ್ಮೋಡ: ಉಕ್ರೇನ್ ತೊರೆಯುವಂತೆ ಭಾರತದ ನಾಗರಿಕರು, ವಿದ್ಯಾರ್ಥಿಗಳಿಗೆ ಸೂಚನೆ