ಮನೆ ಅಪರಾಧ ಮನೆಗಳ್ಳತನಕ್ಕೆ ಯತ್ನ: ನಾಲ್ವರ ಬಂಧನ, ಇಬ್ಬರಿಗೆ ಗುಂಡೇಟು

ಮನೆಗಳ್ಳತನಕ್ಕೆ ಯತ್ನ: ನಾಲ್ವರ ಬಂಧನ, ಇಬ್ಬರಿಗೆ ಗುಂಡೇಟು

0

ಕಲಬುರಗಿ(Kalburgi): ಮನೆಗಳ್ಳತನಕ್ಕೆ ಯತ್ನಿಸಿದ ಇಬ್ಬರು ದರೋಡೆಕೋರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.  ಈ ಸಂದರ್ಭ ಓರ್ವ ಪೇದೆ ಕೂಡ ಗಾಯಗೊಂಡಿದ್ದಾರೆ.

 ಮಹಾರಾಷ್ಟ ಮೂಲದ ತುಳಜಾಪುರ ತಾಲೂಕಿಲ ಜಾಳಕೋಟ  ಗ್ರಾಮದ ಲಹು ಬಾಹುರಾವ ಸಾವಂತ್  (30) ಮತ್ತು ದೇವಿದಾಸ ದತ್ತುಸಾಬ ಸಾವಂತ್ (20) ಗುಂಡೇಟು ತಿಂದವರು.

ಕಳೆದ ರಾತ್ರಿ ನಾಲ್ವರು ದರೋಡೆಕೋರರು ನಗರದ ಬಿದ್ದಾಪುರ ಕಾಲೊನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನಿಸಿದ್ದು, ಈ ವೇಳೆ ಕಾಲೊನಿಯ ಜನ ಪೊಲೀಸ್ ಕಂಟ್ರೋಲ್  ರೂಂಗೆ ಫೋನ್ ಮಾಡಿದ್ದಾರೆ. ತಕ್ಷಣವೇ   ಅಶೋಕನಗರ ಪೊಲೀಸರು ಸ್ಥಳಕ್ಕೆ ಧಾವಿಸಿ  ಸಾರ್ವಜನಿಕರ ಸಹಕಾರದಿಂದ ನಾಲ್ವರು  ದರೋಡೆಕೋರರನ್ನು ಹಿಡಿಯುವಲ್ಲಿ  ಯಶಸ್ವಿಯಾಗಿದ್ದಾರೆ.

ನಂತರ ಅವರು  ವಾಸವಿದ್ದ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ  ಇಬ್ಬರು ದರೋಡೆಕೋರರು ತಮ್ಮ ಬಳಿ  ಇದ್ದ ಚಾಕುವಿನಿಂದ ಅಶೋಕನಗರ  ಪೊಲೀಸ್ ಠಾಣೆ ಕಾನ್ಸಟೇಬಲ್  ಶಿವಶರಣಪ್ಪ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

ಈ  ವೇಳೆ ಸ್ಥಳದಲ್ಲಿದ್ದ ಅಶೋಕನಗರ  ಠಾಣೆ ಸರ್ಕಲ್ ಇನ್ಸಪೆಕ್ಟರ್ ಪಂಡಿತ ಸಾಗರ ತಮ್ಮ ಹಾಗೂ ಸಿಬ್ಬಂದಿಗಳ  ಆತ್ಮ ರಕ್ಷಣೆಗಾಗಿ ಮೊದಲು ಗಾಳಿಯಲ್ಲಿ  ಗುಂಡು ಹಾರಿಸಿದ್ದಾರೆ. ಆಗಲೂ ದರೋಡೆಕೋರರು ತಮ್ಮ ಕೈಯಲ್ಲಿದ್ದ  ಚಾಕು ಬಿಸಾಡದೇ ಇದ್ದುದ್ದರಿಂದ ಗುಂಡು ಹಾರಿಸಿದ್ದಾರೆ.  ಇಬ್ಬರು ದರೋಡೆಕೋರರ ಕಾಲಿಗೆ  ಗುಂಡೇಟು ತಗುಲಿದೆ. ಗುಂಡೇಟಿನಿಂದ  ಗಾಯಗೊಂಡಿರುವ ದರೋಡೆಕೋರರಾದ  ಲಹು ಹಾಗೂ ದೇವಿದಾಸ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೈದಿಗಳ ವಾರ್ಡ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಹಿಂದಿನ ಲೇಖನತೊಂದರೆ ನಿವಾರಿಸಿ, ಸೌಲಭ್ಯ ಕಲ್ಪಿಸಿ: ಅಲ್ಪಸಂಖ್ಯಾತರ ಆಗ್ರಹ
ಮುಂದಿನ ಲೇಖನಬಾದಾಮಿ ಸೇವಿಸುವುದರಿಂದ ಸಿಗುವ ಆರೋಗ್ಯ ಲಾಭ