ಮನೆ ಅಪರಾಧ ಲೇಡಿ ಡಾನ್’ನಿಂದ ಉದ್ಯಮಿಯ ಕಿಡ್ನ್ಯಾಪ್​’ಗೆ ಯತ್ನ: ಆರೋಪ

ಲೇಡಿ ಡಾನ್’ನಿಂದ ಉದ್ಯಮಿಯ ಕಿಡ್ನ್ಯಾಪ್​’ಗೆ ಯತ್ನ: ಆರೋಪ

0

ಬೆಂಗಳೂರು: ಬೆಂಗಳೂರಿನಲ್ಲಿ ಲೇಡಿ ಡಾನ್​’ನಿಂದ ಉದ್ಯಮಿಯನ್ನು ಅಪಹರಣ ಮಾಡಲೆತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Join Our Whatsapp Group

ಅಖಿಲ್ ಯಾದವ್ ಎಂಬ ಉದ್ಯಮಿ ಮೇಲೆ ದುರ್ಗಾ ಅಲಿಯಾಸ್ ಸಹನಾ ಗ್ಯಾಂಗ್ ಅಟ್ಯಾಕ್ ಮಾಡಿದೆ ಎನ್ನಲಾಗಿದೆ.

ಘಟನೆಯ ಕುರಿತು ಉದ್ಯಮಿ ಅಖಿಲ್ ಯಾದವ್, ನಗರದ ಬಳ್ಳಾರಿ ರಸ್ತೆಯಲ್ಲಿರುವ ಅಪಾರ್ಟ್ ​​ಮೆಂಟ್ ಮುಂಭಾಗದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿ ಐಷಾರಾಮಿ ಕಾರು ಜಖಂಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಲು‌ ಯತ್ನಿಸಿದ ಗ್ಯಾಂಗ್ ​ನ ಕೃತ್ಯವನ್ನು ಅಲ್ಲಿನ ನಿವಾಸಿಯೊಬ್ಬರು ಮೊಬೈಲ್​ ನಲ್ಲಿ ಸೆರೆ ಹಿಡಿದಿದ್ದಾರೆ. ಹಳೆಯ ವೈಷಮ್ಯದಿಂದ ದುರ್ಗಾ ಅಲಿಯಾಸ್ ಸಹನಾ, ಅಮೋದ್ ಮತ್ತು ತರುಣ್ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಉದ್ಯಮಿ ಕೊಡಿಹಳ್ಳಿಯಲ್ಲಿ ಠಾಣೆಯಲ್ಲಿ ಅವರು ಲಿಖಿತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಹಿಂದಿನ ಲೇಖನಜೂನ್ ನಲ್ಲಿ ‘ಎಲ್ರ ಕಾಲೆಳಿಯತ್ತೆ ಕಾಲ’ ಬಿಡುಗಡೆ
ಮುಂದಿನ ಲೇಖನಹರಾಜಿನಲ್ಲಿ ಕೋಟಿ ಪಡೆದು ಆಟದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರು