ಮನೆ ಮನರಂಜನೆ ಪ್ರೇಕ್ಷಕರ ಮನಗೆದ್ದ ‘ವಿಡುದಲೈ’ ಸಿನಿಮಾ ಈಗ ಕನ್ನಡದಲ್ಲೂ ಲಭ್ಯ: ಜೀ5 ಒಟಿಟಿ ಮೂಲಕ ಪ್ರಸಾರ

ಪ್ರೇಕ್ಷಕರ ಮನಗೆದ್ದ ‘ವಿಡುದಲೈ’ ಸಿನಿಮಾ ಈಗ ಕನ್ನಡದಲ್ಲೂ ಲಭ್ಯ: ಜೀ5 ಒಟಿಟಿ ಮೂಲಕ ಪ್ರಸಾರ

0

ಕಾಲಿವುಡ್​’ನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರು ಆ್ಯಕ್ಷನ್​-ಕಟ್​ ಹೇಳಿರುವ ‘ವಿಡುದಲೈ’ ಸಿನಿಮಾ ಜೀ5ನಲ್ಲಿ ಪ್ರಸಾರ ಕಂಡು ಎಲ್ಲರ ಮೆಚ್ಚುಗೆ ಗಳಿಸಿದೆ. ತಮಿಳಿನ ಈ ಸಿನಿಮಾವನ್ನು ಈಗ ಕನ್ನಡದಲ್ಲೂ ವೀಕ್ಷಿಸಬಹುದು.

Join Our Whatsapp Group

ವಿಜಯ್ ಸೇತುಪತಿ, ಸೂರಿ, ಗೌತಮ್ ಮೆನನ್, ಕನ್ನಡದ ಸರ್ದಾರ್ ಸತ್ಯ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿಜಯ್ ಸೇತುಪತಿ, ಸೂರಿ, ಕನ್ನಡದ ಸರ್ದಾರ್ ಸತ್ಯ, ಗೌತಮ್ ಮೆನನ್ ಮುಂತಾದ ಅನೇಕ ಕಲಾವಿದರು ನಟಿಸಿರುವ ಈ ಚಿತ್ರವನ್ನು ನೋಡಿದ ವಿಮರ್ಶಕರ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚೆಗೆ ಪರಭಾಷೆ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದ್ದು, ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಈಗ ‘ವಿಡುದಲೈ’ ಸಿನಿಮಾ ಕೂಡ ಕನ್ನಡದಲ್ಲಿ ನೋಡುವ ಅವಕಾಶ ದೊರೆತಿದೆ.

ಆರ್‌.ಎಸ್‌. ಇನ್ಫೋಟೈನ್‌ ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಎಸ್. ಎಲ್ರೆಡ್ ಕುಮಾರ್ ಅದ್ದೂರಿಯಾಗಿ ‘ವಿಡುದಲೈ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪೊಲೀಸ್​ ಕಾನ್ಸ್ ​ಟೇಬಲ್​ ಮತ್ತು ಕ್ರಾಂತಿಕಾರಿ ಹೋರಾಟಗಾರನೊಬ್ಬನ ನಡುವಿನ ಕಥೆ ಈ ಚಿತ್ರದಲ್ಲಿದೆ.

‘ವಿಡುದಲೈ’ ಕಥೆಯನ್ನು 2 ಭಾಗದಲ್ಲಿ ತೆರೆಗೆ ತರಲಾಗುತ್ತಿದೆ. ಮೊದಲ ಪಾರ್ಟ್​ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಎರಡನೇ ಭಾಗದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.

ಹಿಂದಿನ ಲೇಖನನಿಸಾನ್ ನಿಂದ Magnite GEZA ಸ್ಪೆಷಲ್ ಎಡಿಷನ್ ಮಾರುಕಟ್ಟೆಗೆ
ಮುಂದಿನ ಲೇಖನIPL 2023: ಗೋಲ್ಡನ್ ಡಕ್ ಔಟ್ ಆಗಿ ಧವನ್ ರ ಅನಗತ್ಯ ದಾಖಲೆ ಮುರಿದ ಬಟ್ಲರ್!