ಮನೆ ಕೃಷಿ ಬದುಕ ಬರಡು ಮಾಡಬ್ಯಾಡ್ರಿ: ಬೀಜ ಸಂರಕ್ಷಕಿ ಪಾಪಮ್ಮ

ಬದುಕ ಬರಡು ಮಾಡಬ್ಯಾಡ್ರಿ: ಬೀಜ ಸಂರಕ್ಷಕಿ ಪಾಪಮ್ಮ

0

\ಮೈಸೂರು(Mysuru): ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ಜನರ ಬಾಯಿಗ್ ಸುಣ್ಣ ಹಾಕಬ್ಯಾಡ್ರಿ. ಬದುಕ ಬರಡು ಮಾಡಬ್ಯಾಡ್ರಿ ಹೀಗೆ ಹೇಳಿದವರು ಬೀಜ ಸಂರಕ್ಷಕಿ ಪಾಪಮ್ಮ.

ನಗರದ ಮುಕ್ತ ಗಂಗೋತ್ರಿಯಲ್ಲಿ ಆಶಾ (ಅಲಯನ್ಸ್‌ ಫಾರ್‌ ಸಸ್ಟೈನಬಲ್ ಆ್ಯಂಡ್‌ ಹೊಲಿಸ್ಟಿಕ್‌ ಅಗ್ರಿಕಲ್ಚರ್‌) ಕಿಸಾನ್‌ ಸ್ವರಾಜ್‌’ ಸಂಸ್ಥೆ ಆಯೋಜಿಸಿರುವ 3 ದಿನಗಳ ರಾಷ್ಟ್ರಮಟ್ಟದ 5ನೇ ‘ಕಿಸಾನ್ ಸ್ವರಾಜ್ ಸಮ್ಮೇಳನ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

35 ವರ್ಷದಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. 50 ಜಾತಿಯ ಬೀಜಗಳನ್ನು ಉಳಿಸಿದ್ದೇನೆ. ನೀವೂ ಉಳಿಸಿ. ನಮ್ಮ ಮಕ್ಕಳನ್ನ ಬೆಳೆಸೇದೋ ಅದೇನೆ ಎಂದರು.

ಕೇರಳ ಕೃಷಿ ಸಚಿವ ಪ್ರಸಾದ್ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯಲ್ಲಿ ಕೃಷಿ ವಲಯದ ಕಾಣಿಕೆಯೂ ಇದೆ. ಪರಿಸರ ಕೇಂದ್ರಿತ ನೈಸರ್ಗಿಕ ಕೃಷಿ ಮರೆಯಲಾಗಿದೆ. ಕೃಷಿ ವಲಯವು ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಸಾವಯವ ಕೃಷಿಯತ್ತ ಹೊರಳುವುದು ತುರ್ತಾಗಿದೆ ಎಂದರು.

ಕೃಷಿ ವಿಜ್ಞಾನಿ ಎ.ಆರ್.ವಾಸವಿ, ಜಾಗತಿಕ ವಾತಾವರಣ ಬದಲಾವಣೆ ಎಲ್ಲ ದೇಶಗಳ ಆಹಾರ ಭದ್ರತೆಗೆ ಸವಾಲನ್ನು ಒಡ್ಡಿದೆ. ಕೃಷಿ ವೈವಿಧ್ಯ ಉಳಿಸಿಕೊಳ್ಳುವುದೇ ನಮ್ಮ ಮುಂದಿರುವ ಆಯ್ಕೆ’ ಎಂದು ಅಭಿಪ್ರಾಯಪಟ್ಟರು.

ಬಂಡವಾಳಶಾಹಿ ಪ್ರೇರಿತ ಮಾರುಕಟ್ಟೆಯು ಆದಾಯ ಕೇಂದ್ರಿತ ಕೃಷಿಗೆ ರೈತರನ್ನು ತಳ್ಳಿತು. ಅದರಿಂದ ವೈವಿಧ್ಯದ ಬೆಳೆ ಪದ್ಧತಿ ಮರೆಯಾಗಿ ವಾಣಿಜ್ಯ, ಏಕ ಬೆಳೆಯು ಕೃಷಿಭೂಮಿಯನ್ನು ಆವರಿಸಿದೆ. ಮಣ್ಣು ಸತ್ವ ಕಳೆದುಕೊಂಡಿದೆ’ ಎಂದು ವಿಷಾದಿಸಿದರು‌.

ಹಸಿರು ಕ್ರಾಂತಿಯು ಪಾರಂಪರಿಕ ಕೃಷಿಯನ್ನು ಅವಸಾನಕ್ಕೆ ತಳ್ಳಿದೆ. ಕೃಷಿ ಭೂಮಿಯನ್ನು ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಹಾಳು ಮಾಡಿವೆ. ರೈತ ಸಮುದಾಯ ಆರಂಭದಲ್ಲಿ ಲಾಭಗಳಿಸಿದರೂ ಕಾಲಾನಂತರ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಸ್ಥಳೀಯ ಆಹಾರ ಬೆಳೆಗಳನ್ನು ಮತ್ತೆ ಬೆಳೆಯಲು ಪ್ರೋತ್ಆಹಿಸಲು ಹಲವು ರೈತ ಸೇವಾ ಸಂಘಟನೆಗಳು ತೊಡಗಿಸಿಕೊಂಡಿರುವುದು ಭರವಸೆಯಾಗಿದೆ ಎಂದು ಹೇಳಿದರು.

ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಆಶಾ ಸಂಸ್ಥೆಯ ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ಸಮ್ಮೇಳನದ ಸ್ವಾಗತ ಸದಸ್ಯ ಕೃಷ್ಣಪ್ರಸಾದ್, ಪರಿಸರ ತಜ್ಞ ಯು.ಎನ್.ರವಿಕುಮಾರ್, ಕೆಎಸ್ಒಯು ಪ್ರಭಾರ ಕುಲಪತಿ ಖಾದರ್ ಪಾಷಾ, ‘ಆಶಾ ಕಿಸಾನ್‌ ಸ್ವರಾಜ್‌’ ಸಂಸ್ಥೆ ರಾಷ್ಟ್ರೀಯ ಸಂಚಾಲಕರಾದ ಕಪಿಲ್ ಶಾ, ನಚಿಕೇತ್, ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ ಇದ್ದರು.