ಮನೆ ಸುದ್ದಿ ಜಾಲ ಭಾರತದ 29 ಪ್ರಾಚೀನ ವಸ್ತುಗಳನ್ನು ಹಿಂತಿರುಗಿಸಿದ ಆಸ್ಟ್ರೇಲಿಯಾ

ಭಾರತದ 29 ಪ್ರಾಚೀನ ವಸ್ತುಗಳನ್ನು ಹಿಂತಿರುಗಿಸಿದ ಆಸ್ಟ್ರೇಲಿಯಾ

0

ನವದೆಹಲಿ: ಭಾರತದ 29 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿರುವ ಆಸ್ಟ್ರೇಲಿಯಾಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ.

ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ) ಮಾಹಿತಿ ನೀಡಿದೆ. ಪ್ರಾಚೀನ ವಸ್ತುಗಳನ್ನು ಆರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇವು ಶಿವ ದೇವರು, ಶಕ್ತಿ ಪೂಜೆ, ಭಗವಾನ್ ವಿಷ್ಣು, ಜೈನ ಸಂಪ್ರದಾಯ, ವರ್ಣಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಒಳಗೊಂಡಿವೆ.

ಬೇರೆ ಬೇರೆ ಶತಮಾನಕ್ಕೆ ಸೇರಿದ ಪ್ರಾಚೀನ ವಸ್ತುಗಳನ್ನು ಇವು ಒಳಗೊಂಡಿವೆ. ಬಳಿಕ ಇವುಗಳನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ. ಮರಳುಗಲ್ಲು, ಅಮೃತಶಿಲೆ, ಕಂಚು, ಕಾಗದ, ಹಿತ್ತಾಳೆಗಳಿಂದ ಶಿಲ್ಪ ಹಾಗೂ ವರ್ಣಶಿಲ್ಪಗಳನ್ನು ರಚಿಸಲಾಗಿದ್ದು, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳಕ್ಕೆ ಸೇರಿದ್ದಾಗಿದೆ.