ಮನೆ ಅಪರಾಧ ನಟ ದರ್ಶನ್‌ ಕೈದಿ ನಂಬರ್‌ ಹಾಕಿಕೊಂಡು ವ್ಹೀಲಿಂಗ್‌ ಮಾಡಿದ ಆಟೋ ಚಾಲಕ ಸೆರೆ

ನಟ ದರ್ಶನ್‌ ಕೈದಿ ನಂಬರ್‌ ಹಾಕಿಕೊಂಡು ವ್ಹೀಲಿಂಗ್‌ ಮಾಡಿದ ಆಟೋ ಚಾಲಕ ಸೆರೆ

0

ಬೆಂಗಳೂರು: ಅತೀರೇಕದ ವರ್ತನೆಯಿಂದ ನಟ ದರ್ಶನ್‌ ಅಭಿಮಾನಿಗಳು ಸುದ್ದಿ ಆಗುತ್ತಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ ಗೆ 6106 ಕೈದಿ ಸಂಖ್ಯೆ ನೀಡಲಾಗಿದ್ದು, ನಗರದಲ್ಲಿ ಆಟೋ ಚಾಲಕನೊಬ್ಬ ಈ ಸಂಖ್ಯೆಯ ಸ್ಟಿಕ್ಕರ್‌ ಹಾಕಿಸಿಕೊಂಡಿದಲ್ಲದೇ, ಅಪಾಯಕಾರಿಯಾಗಿ ಆಟೋ ವ್ಹೀಲಿಂಗ್‌ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

Join Our Whatsapp Group

ಬನ್ನೇರುಘಟ್ಟ ನಿವಾಸಿ ಜಗದೀಶ್‌ ಅಲಿಯಾಸ್‌ ಜಗ್ಗು(29) ಬಂಧಿತ.

ಆರೋಪಿ ತನ್ನ ಆಟೋ ಹಿಂಭಾಗದಲ್ಲಿ ಕೈದಿ ನಂಬರ್‌ 6106 ಸ್ಟಿಕ್ಕರ್‌ ಅಂಟಿಸಿಕೊಂಡಿದ್ದಾನೆ. ಅಲ್ಲದೆ, ಇತ್ತೀಚೆಗೆ ಲೂಲು ಮಾಲ್‌ ಸಮೀಪದ ಅಂಡರ್‌ಪಾಸ್‌ನಲ್ಲಿ ಅಪಾಯ ಕಾರಿ ವ್ಹೀಲಿಂಗ್‌ ಮಾಡಿದ್ದ. ಅದರಿಂದ ಇತರೆ ವಾಹನ ಸವಾರರಿಗೆ ತುಂಬ ತೊಂದರೆ ಆಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರ ಸಂಚಾರ ಠಾಣೆ ಪೊಲೀಸರು ಆಟೋ ಸಂಖ್ಯೆ ಆಧರಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಆಟೋ ಜಪ್ತಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.