ಮನೆ ರಾಜಕೀಯ ಸರ್ಕಾರದ ವಿರುದ್ಧ ಅಕ್ರಮಗಳ ದಾಖಲೆ ಬಿಡುಗಡೆಗೆ ಸಿದ್ದತೆ: ಹೆಚ್.ಡಿ.ಕುಮಾರಸ್ವಾಮಿ

ಸರ್ಕಾರದ ವಿರುದ್ಧ ಅಕ್ರಮಗಳ ದಾಖಲೆ ಬಿಡುಗಡೆಗೆ ಸಿದ್ದತೆ: ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು(Bengaluru):  ಸರ್ಕಾರದ ವಿರುದ್ಧ ಅಕ್ರಮಗಳ ಕುರಿತು ದಾಖಲೆ ಬಿಡುಗಡೆಗೆ ಸ್ಪೀಕರ್ ಬಳಿ ಅವಕಾಶ ಕೇಳಿದ್ದೇನೆ. ದಾಖಲೆ ಬಿಡುಗಡೆಗೆ ಸಿದ್ಧತೆ ನಡೆಸಿದ್ದೇನೆ. ನಾಳೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ನ್ಯೂಸ್ ಸೆನ್ಸ್  ಮಾಡೋಕೆ ನೀಡಿದ ಹೇಳಿಕೆಯಲ್ಲ. ಸರ್ಕಾರದ  ತೀರ್ಮಾನದಿಂದ  ನೂರಾರು ಕೋಟಿ ನಷ್ಟವಾಗಿದೆ. ಈ ಸಂಬಂಧ ನಾಳೆ ದಾಖಲೆ ಸಮೇತ ಅಕ್ರಮ ಬಿಚ್ಚಿಡುವೆ ಎಂದರು.

ನನ್ನ ಅವಧಿಯಲ್ಲಿ ರಾಜಕಾಲುವೆ ಒತ್ತುವರಿ ಆಗಿಲ್ಲ ಒತ್ತುವರಿ ಆಗಿದೆ ಎಂದು ಜನ ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನನ್ನ ಅವಧಿಯಲ್ಲಿ ಬೆಂಗಳೂರಿಗೆ ಮೋಸ ಮಾಡಿಲ್ಲ ಜನತೆಗೆ ಮೋಸ ಮಾಡಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಸಿದ್ಧ ಎಂದರು.

ಹಿಂದಿನ ಲೇಖನಜನಪದ ವಿವಿ ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆ ಆಗಲಿ: ಗೋವಿಂದ ಕಾರಜೋಳ
ಮುಂದಿನ ಲೇಖನಹಣ ಅಕ್ರಮ ವರ್ಗಾವಣೆ: ವಿಚಾರಣೆಗೆ ಹಾಜರಾಗುವಂತೆ ನಟಿ ಜಾಕ್ವೆಲಿನ್ ಮತ್ತೆ ಸಮನ್ಸ್