ಕ್ಯಾಲಿಫೋರ್ನಿಯಾ,ಅಮೆರಿಕ : ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಅವಿನಾಶ್ ಸಾಬ್ಲೆ ಅವರು ಸ್ಯಾನ್ ಜುವಾನ್ ಕ್ಯಾಪಿಸ್ಟ್ರಾನೊದಲ್ಲಿ ನಮ್ಮ ದೇಶದ ಸುಮಾರು 30 ವರ್ಷಗಳಷ್ಟು ಹಳೆಯದಾದ ದಾಖಲೆಯೊಂದನ್ನು ಹಿಂದಿಕ್ಕಿದ್ದು, ಸೌಂಡ್ ರನ್ನಿಂಗ್ ಟ್ರ್ಯಾಕ್ ಮೀಟ್‌ನ 5000 ಮೀಟರ್ ಓಟದಲ್ಲಿ ಅವಿನಾಶ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
1992ರಲ್ಲಿ 5000 ಮೀಟರ್ ಓಟದಲ್ಲಿ ಬಹದ್ದೂರ್ ಪ್ರಸಾದ್ ನಿರ್ಮಿಸಿದ್ದ ದಾಖಲೆಯನ್ನು ಅವಿನಾಶ್ ಸಾಬ್ಲೆ ಮುರಿದಿದ್ದಾರೆ. 5000 ಮೀಟರ್ ಓಟವನ್ನು ಕೇವಲ 13:25.65 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ.
ಬಹದ್ದೂರ್ ಪ್ರಸಾದ್ ಅವರು 1992ರಲ್ಲಿ 13:29.70 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದ್ದು, ಈ ದಾಖಲೆಯನ್ನು ಅವಿನಾಶ್ ಹಿಂದಿಕ್ಕಿದ್ದಾರೆ. ಅಂದಹಾಗೆ ಅವರು ಈ ಓಟದಲ್ಲಿ 12ನೇ ಸ್ಥಾನ ಪಡೆದಿದ್ದಾರೆ.ಈ ಹಿಂದೆ ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವಿನಾಶ್ 5000 ಮೀಟರ್ ಓಟವನ್ನು 13.39.43 ನಿಮಿಷದಲ್ಲಿ ಪೂರ್ಣಗೊಳಿಸಿದ್ದರು.