ಮನೆ ಕ್ರೀಡೆ ಕ್ಯಾಲಿಫೋರ್ನಿಯಾದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಅವಿನಾಶ್ ಸಾಬ್ಲೆ

ಕ್ಯಾಲಿಫೋರ್ನಿಯಾದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಅವಿನಾಶ್ ಸಾಬ್ಲೆ

0

ಕ್ಯಾಲಿಫೋರ್ನಿಯಾ,ಅಮೆರಿಕ : ಭಾರತದ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಅವಿನಾಶ್ ಸಾಬ್ಲೆ ಅವರು ಸ್ಯಾನ್ ಜುವಾನ್ ಕ್ಯಾಪಿಸ್ಟ್ರಾನೊದಲ್ಲಿ ನಮ್ಮ ದೇಶದ ಸುಮಾರು 30 ವರ್ಷಗಳಷ್ಟು ಹಳೆಯದಾದ ದಾಖಲೆಯೊಂದನ್ನು ಹಿಂದಿಕ್ಕಿದ್ದು, ಸೌಂಡ್ ರನ್ನಿಂಗ್ ಟ್ರ್ಯಾಕ್ ಮೀಟ್‌ನ 5000 ಮೀಟರ್​ ಓಟದಲ್ಲಿ ಅವಿನಾಶ್ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

1992ರಲ್ಲಿ 5000 ಮೀಟರ್​​ ಓಟದಲ್ಲಿ ಬಹದ್ದೂರ್ ಪ್ರಸಾದ್ ನಿರ್ಮಿಸಿದ್ದ ದಾಖಲೆಯನ್ನು ಅವಿನಾಶ್ ಸಾಬ್ಲೆ ಮುರಿದಿದ್ದಾರೆ. 5000 ಮೀಟರ್ ಓಟವನ್ನು ಕೇವಲ 13:25.65 ನಿಮಿಷದಲ್ಲಿ ಪೂರ್ಣಗೊಳಿಸಿದ್ದಾರೆ.

ಬಹದ್ದೂರ್ ಪ್ರಸಾದ್ ಅವರು 1992ರಲ್ಲಿ 13:29.70 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸುವ ಮೂಲಕ ದಾಖಲೆ ಬರೆದಿದ್ದು, ಈ ದಾಖಲೆಯನ್ನು ಅವಿನಾಶ್ ಹಿಂದಿಕ್ಕಿದ್ದಾರೆ. ಅಂದಹಾಗೆ ಅವರು ಈ ಓಟದಲ್ಲಿ 12ನೇ ಸ್ಥಾನ ಪಡೆದಿದ್ದಾರೆ.ಈ ಹಿಂದೆ ಕೋಝಿಕ್ಕೋಡ್‌ನಲ್ಲಿ ನಡೆದ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವಿನಾಶ್​​ 5000 ಮೀಟರ್​ ಓಟವನ್ನು 13.39.43 ನಿಮಿಷದಲ್ಲಿ ಪೂರ್ಣಗೊಳಿಸಿದ್ದರು.

ಹಿಂದಿನ ಲೇಖನನಾನು ಯಾರಿಗೂ ಐದು ಪೈಸೆ ಕೊಡದೆ ಸಿಎಂ ಆಗಿದ್ದೆ: ಸಿದ್ದರಾಮಯ್ಯ
ಮುಂದಿನ ಲೇಖನವಾಣಿಜ್ಯ ಇಲಾಖೆಯ ಸಹಾಯಕ ಆಯುಕ್ತೆ ಎಸಿಬಿ ಬಲೆಗೆ