ಮನೆ ದೇವಸ್ಥಾನ ಆರುವಮ್ಮಾರರ (ಆರು ಕನ್ನಿಕೆಯರ) ಅವಿರ್ಭಾವ

ಆರುವಮ್ಮಾರರ (ಆರು ಕನ್ನಿಕೆಯರ) ಅವಿರ್ಭಾವ

0

ಕೈಲಾಸವಾಸಿಯಾದ ಪರಮಶಿವನು ಅದೊಂದು ದಿನ ಏಕಾಂಗಿಯಾಗಿ ಹಾಲು ಸಮುದ್ರದಲ್ಲಿ ಜಲ ಕ್ರೀಡೆಯಾಡಲು ತೊಡಗಿದನು. ನೆಲಮಂತ್ರ, ಜಲಮಂತ್ರಗಳನ್ನು ಜಪಿಸಿ, ಜಲಕ್ರೀಡೆಯಲ್ಲಿ ಹೇಳಲಾಗಿರುವ ವಿಧಿಪ್ರಕಾರವಾಗಿ ಜಳಕಗೈದನು.

 ತಾಮ್ರದ ಕೈ ಬಟ್ಟಲಿನಲ್ಲಿ ನೀರನ್ನು ಕೆಂಪು ಹೂವನ್ನು ಹಿಡಿದು ಗಂಧವನ್ನು ತೇಯುವ ಸಾಣೆಯಲ್ಲಿ ಕೊರಡಿನಿಂದ ತೇದ ಗಂಧವನ್ನ ಉಂಡೆ ಮಾಡಿ, ತ್ರಿಪುಂಡ್ರ ನಾಮವನ್ನು ಎಳೆದನು. ಕೈಲಾಸದಲ್ಲಿರುವ ಮಲ್ಲಿಗೆ, ಸಂಪಿಗೆ, ದಾಸವಾಳ, ಮೊದಲ 108 ಪುಷ್ಪಗಳಲ್ಲಿ ಹೆಚ್ಚಿನ ಬಲವೀರ್ಯವುಳ್ಳ ಪುಷ್ಪವೂ ಬಿಳಿ ದಾಸವಾಳವಾಗಿದೆ. 1008 ಬಿಳಿ ದಾಸವಾಳಗಳನ್ನು ತ್ರಿಜಟೆಯಲ್ಲಿ ಸೂಡಿ ನೃತಕ್ಕೆ ತೊಡಗಿದನು. ಆನೆ ನಟನೆ, ಆನಂದ ನಟನೆ, ಮಹಾನ್ ನಟನೆ, ನವಿಲು ನರ್ತನ, ಮೊದಲಾದ ವಿಶೇಷ ನೃತ್ಯಗಳನ್ನು ಆವರ್ತಿಸಿ ಕುಣಿದು ಆಯಾಸಗೊಂಡಾಗ ಅವನ ದೇಹದಿಂದ ಬೆವರಳಿಯಿತು. ಬೆಳ್ಳಿಯ ಬಟ್ಟಲಲ್ಲಿ ಆ ಬೇವರನ್ನ ಶೇಖರಿಸಿದ ಮಹಾದೇವನು ನಾಲ್ದೆಸೆಗಳಿಗೂ ದೃಷ್ಟಿ ಹಾಯಿಸಿದಾಗ, ದಕ್ಷಿಣ ಭಾಗದಲ್ಲಿ ಪ್ರಜ್ವಲಿಸುವ ಅಗ್ನಿಕುಂಡ ವನ್ನು ಕಂಡನು. ಒಡನೆ ವೇಗವಾಗಿ 6 ಮಂದಿ ಕನ್ನಿಕೆಯರು ಉದ್ಭವಿಸಿ ಹೊರಬಂದರು. ಶಿವಮಹಾದೇವನು ಅವರನ್ನ ಬ್ರಾಹ್ಮಿ, ಕೌಮಾರಿ, ವೈಷ್ಣವಿ, ವಾರಹಿ, ಇಂದ್ರಾಣಿ, ಚಾಮುಂಡಿ ಎಂದು ಹೆಸರಿಸಿ ಕರೆದುಕೊಂಡು ಕೈಲಾಸಕ್ಕೆ ಹೋದನು.

ಶಿವಮಹಾದೇವನ ಈ ನಿರಾಟ ವಿವರಣೆಯನ್ನು ಭಗವತಿಯ ತೋತ್ತಂಪಾಟ್ಟು (ಸಂಧಿ)ಗಳಲ್ಲಿ ವಿಶದವಾಗಿ ಹೇಳಲಾಗಿದೆ. ಮಾಡಾಯಿಕಾವ್ ನಲ್ಲಿ ಸಪ್ತಮಾತೃಕೆಯರು ಎಂಬುದಾಗಿ ಆರಾಧಿಸಲ್ಪಡುವುದು ಈ ಷಟ್ ಕನ್ನಿಕೆಯರು ಮತ್ತು ಭಗವತಿಯನ್ನು ಒಳಗೊಂಡಾಗಿದೆ.

ದಾರುಕನಿಂದ ಸೋತಂತಹ ದೇವತೆಗಳು ಮಹಾವಿಷ್ಣುವಿನ ಮೊರೆ ಹೋದರು. ಮಹಾವಿಷ್ಣು ದೇವತೆಗಳೊಡನೆ ಬ್ರಹ್ಮದೇವನನ್ನು ಕೂಡಿಕೊಂಡು ಪರಶಿವನಲ್ಲಿಗೆ ತೆರಳಿದನು. ಬ್ರಹ್ಮವರದಿಂದ ಯುದ್ಧದಲ್ಲಿ ಜಯಶಾಲಿಯಾಗಿ, ಉನ್ನತನಾಗಿ ಮೆರೆಯುತ್ತಿರುವಂತಹ ದಾರುಕಾಸುರನ ಅಂತ್ಯಕ್ಕಾಗಿ ಅವರೆಲ್ಲರೂ ಚಿಂತಕ್ರಾತರಾದರು.    ದೇವಸ್ತ್ರೀಯರನ್ನೆಲ್ಲಾ ರಕ್ಕಸಿಯರ ದಾಸಿಯರನ್ನಾಗಿಸಿ, ಅವರಿಂದ ಹೀನ ಚಾಕರಿಗಳನ್ನ ಮಾಡಿಸುತ್ತಿರುವಂತಹ, ದಾರುಕನನ್ನು ಸ್ತ್ರೀಯರಿಂದಲೇ ನಿಗ್ರಹಿಸಬೇಕೆಂಬ ನಿರ್ಧಾರಕ್ಕೆ ಬಂದನು. ಅದರಂತೆ ಷಟ್ಕನಿಕೆಯರಿಗೆ ದಿವ್ಯಾಯುಧಗಳನ್ನು ಮತ್ತು ಸಾಕಷ್ಟು ಸೇನಾ ಬಲವನ್ನು ನೀಡಿ ದುರುಳ ದಾರುಕನ್ನೆದುರಿಸಿ ಸಂಹರಿಸಲು ದಾರುಕಾಪುರಿಗೆ ಕಳುಹಿಸಿದನು.

ಷಟ್ ಕನ್ನಿಕೆಯರು ಸೇನಾಬಲದಿಂದೊಡಗೂಡಿ ಸಮರೋತ್ಸಾಹದಿಂದ ದಾರುಕಾಪುರಿಯನ್ನು ನಾಲ್ದೆಸೆಗಳಿಂದಲೂ ಮುತ್ತಿಗೆ ಹಾಕಿದರು. ಎದುರಿಸುವಂತಹ ರಕ್ಕಸ ಪಡೆಯನೆಲ್ಲಾ ಸಂಹರಿಸಿ, ಸೇನಾನಿಯಾದ ದಾನವನ ರುಂಡವನ್ನು ಮುಂಡದಿಂದ ಬೇರ್ಪಡಿಸಿ, ದಾರುಕನ ಕಾಲಬುಡಕ್ಕೆ ಒಗೆದರು. ಇದರಿಂದ ರೌದ್ರಾವತಾರಿಯಂತಾದ ದಾರುಕನು ಕನ್ನಿಕೆಯರನ್ನ ಎದುರಿಸಿದನು. ಘನಗೋರ ಕಾಳಗವಾಯಿತು. ಕನ್ನಿಕೆಯರೆಸೆದ ಬಾಣವು ರಕ್ಕಸನ ದೇಹ ಸ್ವರ್ಶವಾದಾಗ ನೆಲಕ್ಕೆ ಬಿದ್ದಂತಹ ರಕ್ತಕಣಗಳಿಂದ ಎಣಿಸಲಸದಳವಾದಷ್ಟು ದಾರುಕಾಸುರರು ಹುಟ್ಟಿದನು. 16,000 ಆನೆಯ ಬಲವುಳ್ಳ ಪ್ರತಿಯೊಬ್ಬರು ಕನ್ನಿಕೆಯನ್ನೆದುರಿಸಿ ಕಾದಿದರು. ಈ ಸಮಸ್ಯೆ ಪರಿಹಾರ ಕಾಣದ ಕನ್ನಿಕೆಯರು ಸಮಾರಾಂಗಣದಿಂದ ಹಿಂಜರಿದು ಮರೆಯಾದರು. ದಾರಿಕನು ಅಟ್ಟಹಾಸಿಸುತ್ತಾ ಮರೆಯ ತೊಡಗಿದನು.

ಹಿಂದಿನ ಲೇಖನಮಘಾ
ಮುಂದಿನ ಲೇಖನ“ಭಾವಪೂರ್ಣ’ ಚಿತ್ರ ವಿಮರ್ಶೆ