ಮನೆ ಸ್ಥಳೀಯ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತು ಜಾಗೃತಿ ಕಾರ್ಯಾಗಾರ

ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತು ಜಾಗೃತಿ ಕಾರ್ಯಾಗಾರ

0

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ,ಮೈಸೂರು ಹಾಗೂ ಪೊಲೀಸ್ ತರಬೇತಿ ಶಾಲೆ ಘಟಕ, ಮೈಸೂರು ಸಂಯೋಜನೆಯೊoದಿಗೆ ಕೆ.ಪಿ.ಎ ಹೊಸ ಘಟಕದ ಸಭಾಂಗಣದಲ್ಲಿ ಜುಲೈ 1 ರಂದು ಬೆಳಗ್ಗೆ 9 ಗಂಟೆಯಿoದ 10.30 ರವರೆಗೆ ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನ ಕುರಿತು ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

Join Our Whatsapp Group

ಕಾರ್ಯಗಾರಕ್ಕೆ ಪೊಲೀಸ್ ಅಧಿಕಾರಿಗಳು, ಅಭಿಯೋಜನಾ ಅಧಿಕಾರಿಗಳು, ಕಾರಾಗೃಹ ಅಧಿಕಾರಿಗಳು, ಹಾಗೂ ನ್ಯಾಯ ವಿಜ್ಞಾನ ಪ್ರಯೋಗಾಲಯ ತಜ್ಞರು ಕಾರ್ಯಕ್ರಮಕ್ಕೆ ಬೆಳಗ್ಗೆ 8.30 ರೊಳಗಾಗಿ ಅಕಾಡೆಮಿಯಲ್ಲಿ ಹಾಜರಿರುವಂತೆ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಪೊಲೀಸ್ ಅಕಾಡೆಮಿ ಎಫ್.ಪಿ.ಬಿ.ಯ ಸಹಾಯಕ ನಿರ್ದೇಶಕರಾದ ಎಸ್ ವೆಂಕಟೇಶ್ ಅವರ ದೂ.ಸಂ: 9480800340 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ಗೀತ ಎಂ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಜೈವಿಕವಾಗಿ ವಿಘಟನೆಯಾಗುವ ಕ್ಯಾರಿಬ್ಯಾಗ್ ಗೆ ಅನುಮತಿ: ಈಶ್ವರ ಖಂಡ್ರೆ
ಮುಂದಿನ ಲೇಖನಕಂಡೇ ನಾ ಕಂಡೆ