ಮನೆ ಸುದ್ದಿ ಜಾಲ ಆಜಾನ್-ಸುಪ್ರಭಾತ ಅಭಿಯಾನ: ಕಾಂಗ್ರೆಸ್ ನಿಯೋಗ, ನಗರ ಪೊಲೀಸ್ ಆಯುಕ್ತರಿಂದ ಸಿಎಂ ಭೇಟಿ

ಆಜಾನ್-ಸುಪ್ರಭಾತ ಅಭಿಯಾನ: ಕಾಂಗ್ರೆಸ್ ನಿಯೋಗ, ನಗರ ಪೊಲೀಸ್ ಆಯುಕ್ತರಿಂದ ಸಿಎಂ ಭೇಟಿ

0

ಬೆಂಗಳೂರು(Bengaluru): ರಾಜ್ಯದಲ್ಲಿ ಇಂದು ಸೋಮವಾರ ಆಜಾನ್​ v/s ಸುಪ್ರಭಾತ ಸಂಘರ್ಷ ಹೊತ್ತಲ್ಲಿ ಕಾಂಗ್ರೆಸ್​ ನಿಯೋಗ ಹಾಗೂ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು  ಭೇಟಿ ಮಾಡಿದೆ.

ವಿಪಕ್ಷ ಉಪನಾಯಕ ಯು.ಟಿ.ಖಾದರ್ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ಆರ್​​​​.ಟಿ.ನಗರದಲ್ಲಿರುವ ಸಿಎಂ ನಿವಾಸದಲ್ಲಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ.

ಶಾಸಕರಾದ ಎನ್​​.ಎ.ಹ್ಯಾರಿಸ್​, MLC ನಜೀರ್​​ ಅಹ್ಮದ್ ಭೇಟಿ ನೀಡಿದ್ದಾರೆ. ಶ್ರೀರಾಮಸೇನೆ ಮಸೀದಿಗಳ ಮೇಲಿನ ಮೈಕ್​​ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅಭಿಯಾನ ಸುಪ್ರಭಾತ ಹೋರಾಟವಾಗಿದೆ. ರಾಜ್ಯದ ಹಲವೆಡೆ ಸುಪ್ರಭಾತ ಅಭಿಯಾನ ಆರಂಭವಾಗಿದೆ. ಯಾವುದೇ ಅನಾಹುತ ನಡೆಯದಂತೆ ಕ್ರಮಕ್ಕೆ ಕಾಂಗ್ರೆಸ್​ ನಿಯೋಗ  ಮನವಿ ಮಾಡಿದೆ ಎಂದು ತಿಳಿದುಬಂದಿದೆ. 

ಇನ್ನು ಆಜಾನ್ ಮತ್ತು ಸುಪ್ರಭಾತ ಸಂಘರ್ಷ ಹಿನ್ನೆಲೆ ಬೆಂಗಳೂರು ನಗರದಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಮುನ್ನೆಚ್ಚರಿಕೆ ಕುರಿತು ಮಾಹಿತಿ ನೀಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಇಂದು ಬೆಳಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ.