ಮನೆ ಅಪರಾಧ ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆ

ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆ

0

ಸುರತ್ಕಲ್:‌ ಕಾಣೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳ ಶವ ಮುಲ್ಕಿ ಸಮೀಪ ಹಳೆಯಂಗಡಿ ಡ್ಯಾಂ ಬಳಿ ಫೆ. 27ರ ಮಂಗಳವಾರ ತಡರಾತ್ರಿ ಪತ್ತೆಯಾಗಿದೆ.

ಈಜಲು ಹೋಗಿದ್ದ ವೇಳೆ ವಿದ್ಯಾರ್ಥಿಗಳು ಮುಳುಗಿರುವ ಶಂಕೆ ವ್ಯಕ್ತವಾಗಿದೆ.

ಮೃತ ದೇಹಗಳನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯ ವಿವರ: ಖಾಸಗಿ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ 1.30ಕ್ಕೆ ಶಾಲೆಯಿಂದ ಹೊರಗೆ ತೆರಳಿದ್ದು, ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದರು.

ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಯಶ್ವಿ‌ತ್‌ ಚಂದ್ರಕಾಂತ್‌, ನಿರುಪ್‌,ಅನ್ವಿತ್‌ ಹಾಗೂ ರಾಘವೇಂದ್ರ ಅವರು ಪ್ರಿಪರೇಟರಿ ಪರೀಕ್ಷೆ ಮುಗಿಸಿ ತೆರಳಿದ್ದವರು ನಾಪತ್ತೆಯಾಗಿದ್ದರು.

ಹಿಂದಿನ ಲೇಖನಪಕ್ಷದ ಸಮಸ್ಯೆಯೇಮುಖ್ಯವಾದರೆ ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಡಿಕೆಶಿಗೆ ಆರ್ ಅಶೋಕ್ ಟಾಂಗ್
ಮುಂದಿನ ಲೇಖನಶಿವಮೊಗ್ಗದಲ್ಲಿ ಕರಡಿ ದಾಳಿ: ವ್ಯಕ್ತಿಗೆ ಗಾಯ