ಮನೆ ದೇವಸ್ಥಾನ ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ಬಿಎಸ್’ವೈ

ಕುಟುಂಬ ಸಮೇತರಾಗಿ ರಾಯರ ದರ್ಶನ ಪಡೆದ ಬಿಎಸ್’ವೈ

0

ರಾಯಚೂರು(Raichuru): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ ತೆರಳಿ ಬೆಳಿಗ್ಗೆ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ದರ್ಶನ ಪಡೆದರು.

ಆನಂತರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿಮಾಡಿ ಆಶೀರ್ವಾದ ಪಡೆದರು. ಬಿ.ವೈ.ವಿಜಯೇಂದ್ರ ಹಾಗೂ‌‌‌ ಬಿ.ವೈ.ರಾಘವೇಂದ್ರ ದಂಪತಿ ಸಮೇತರಾಗಿ ಬಂದಿದ್ದರು.

ಈ ವೇಳೆ, ಶ್ರೀಗಳು 2009 ರಲ್ಲಿ ಭೀಕರ ಪ್ರವಾಹ ಬಂದಿತ್ತು. ಅಂದು ಸಿಎಂ ಆಗಿದ್ದಾಗ ಸಾಕಷ್ಟು ಪರಿಹಾರ ನೀಡಿದ್ದೀರಿ. ಕರ್ನಾಟಕ ಹಾಗೂ ಮಂತ್ರಾಲಯ ಸಂಪರ್ಕ ಸೇತುವೆ ನಿರ್ಮಾಣ ಮಾಡಿದ್ದೀರಿ ಎಂದು ಗುಣಗಾನ ಮಾಡಿದರು. ಬಳಿಕ ಶ್ರೀಮಠ ಸನ್ಮಾನಿಸಿ ಗೌರವಿಸಿತು.

ಹಿಂದಿನ ಲೇಖನಸೆಕ್ಷನ್ 164 CrPC ಸಾರ್ವಜನಿಕ ದಾಖಲೆಯ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಲಾಗಿದೆಯೇ; ಹೌದು ಎಂದಾದರೆ, ಅದನ್ನು ಯಾರು ಪ್ರವೇಶಿಸಬಹುದು?: ಕೇರಳ ಹೈಕೋರ್ಟ್ ನೀಡಿರುವ ಉತ್ತರ ಇಲ್ಲಿದೆ
ಮುಂದಿನ ಲೇಖನದಸರಾ ಗಜಪಡೆಯಲ್ಲಿ ಅರ್ಜನನೇ ಬಲಶಾಲಿ