ಮನೆ ಮನರಂಜನೆ ಜಪಾನ್‌ನಲ್ಲಿ “ಬಾಹುಬಲಿ ದಿ ಎಪಿಕ್” ಸಿನಿಮಾ ರಿಲೀಸ್..!

ಜಪಾನ್‌ನಲ್ಲಿ “ಬಾಹುಬಲಿ ದಿ ಎಪಿಕ್” ಸಿನಿಮಾ ರಿಲೀಸ್..!

0

ಟಾಲಿವುಡ್‌ನ ನಿರ್ದೇಶಕ ಎಸ್‌.ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಪಾರ್ಟ್-1 ಹಾಗೂ ಪಾರ್ಟ್-2 ಎರಡೂ ಸಿನಿಮಾವನ್ನ ಒಟ್ಟಾಗಿ ಎಕ್ಸ್‌ಪೀರಿಯನ್ಸ್‌ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡೂ ಸಿನಿಮಾವನ್ನು ಒಟ್ಟಾಗಿ `ಬಾಹುಬಲಿ ದಿ ಎಪಿಕ್’ ಎನ್ನುವ ಟೈಟಲ್‌ನಲ್ಲಿ ಹೊಸ ಅನುಭವ ನೀಡಲಿದೆ.

ಎಸ್‌.ಎಸ್ ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸತ್ಯರಾಜ್ ಸೇರಿದಂತೆ ಅತಿದೊಡ್ಡ ತಾರಾಗಣವಿರುವ `ಬಾಹುಬಲಿ ದಿ ಎಪಿಕ್’ ಸಿನಿಮಾ ಡಿಸೆಂಬರ್ 12ರಂದು ಜಪಾನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ.

ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಹಾಗೂ ಈ ಸಿನಿಮಾ ಪ್ರೀಮಿಯರ್‌ನಲ್ಲಿ ನಟ ಪ್ರಭಾಸ್ ಕೂಡ ಭಾಗಿಯಾಗಲಿದ್ದಾರಂತೆ. ನಿರ್ದೇಶಕ ಎಸ್‌ಎಸ್ ರಾಜಮೌಳಿ ಮಹೇಶ್ ಬಾಬು ಜೊತೆಗೆ ವಾರಾಣಸಿ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾದ ಟೈಟಲ್ ಹಾಗೂ ಸಣ್ಣ ಗ್ಲಿಂಪ್ಸ್ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದಾರೆ. ಚಿತ್ರತಂಡ ಬಾಹುಬಲಿ ಸಿನಿಮಾ ತೆರೆಕಂಡು 10 ವರ್ಷ ಆದ ಹಿನ್ನೆಲೆ `ಬಾಹುಬಲಿ ದಿ ಎಪಿಕ್’ ರಿಲೀಸ್ ಮಾಡುತ್ತಿದೆ. ಭಾರತದಾದ್ಯಂತ ತೆರೆಕಂಡಿದೆ. ಇದೀಗ ಜಪಾನ್‌ನಲ್ಲೂ ಈ ಸಿನಿಮಾ ತೆರೆಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಸಕಲ ತಯಾರಿಯನ್ನ ಮಾಡಿಕೊಂಡಿದೆ.