ಜಬಲ್ ಪುರ: ಹಿಂದುತ್ವ’ ಒಂದು ಧರ್ಮ”ಅಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಸೋಮವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಒಪ್ಪದವರ ಮೇಲೆ ದಾಳಿ ಮಾಡುವುದರಲ್ಲಿ ತೊಡಗಿರುವ ಹಿಂದುತ್ವ ಧರ್ಮವೇ ಅಲ್ಲಾ ಆದರೆ, ಸಾಮರಸ್ಯ ಹಾಗೂ ಎಲ್ಲಾ ವರ್ಗದ ಕಲ್ಯಾಣ ಬಯಸುವ ಸನಾತನ ಧರ್ಮದಲ್ಲಿ ನಂಬಿಕೆಯಿದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಜಬಲ್ ಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ತಿನ ಯುವ ಘಟಕವಾದ ಬಜರಂಗದಳವನ್ನು ಗೂಂಡಾಗಳ ಗ್ಯಾಂಗ್ ಎಂದು ಕರೆದರು. ಹಿಂದೂತ್ವವನ್ನು ಧರ್ಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಧರ್ಮ ರಕ್ಷಣೆಗೆ ಜಯ, ಅಧರ್ಮದ ವಿನಾಶದಂತಹ ಘೋಷಣೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದರು.
ಸನಾತನ ಧರ್ಮ ಪ್ರತಿಯೊಬ್ಬರ ಕಲ್ಯಾಣ ಬಯಸುತ್ತದೆ. ಆದರೆ, ಹಿಂದೂತ್ವದಲ್ಲಿ ಹಾಗಲ್ಲ. ಅದನ್ನು ಒಪ್ಪದವರನ್ನು ದೊಣ್ಣೆಯಿಂದ ಹೊಡೆಯಲಾಗುತ್ತದೆ. ಮನೆಗಳನ್ನು ನಾಶಪಡಿಸಲಾಗುತ್ತದೆ ಎಂದು ಆರೋಪಿಸಿದ ಸಿಂಗ್, ಬಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬಜರಂಗದಳವನ್ನು ಭಜರಂಗ ಬಲಿ (ಹನುಮಾನ್) ನೊಂದಿಗೆ ಹೋಲಿಸುತ್ತಿರುವುದು ನೋವಿನ ಸಂಗತಿ. ಇದು ದೇವರಿಗೆ ಅಗೌರವ ತೋರಿಸುವಂತಹದ್ದು ಎಂದು ಅವರು, ನೀವು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.