ಮನೆ ಅಪರಾಧ ಅನ್ಯಕೋಮಿನ ಯುವಕನ ಮೇಲೆ‌ ಬಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ: ಪ್ರಕರಣ ದಾಖಲು

ಅನ್ಯಕೋಮಿನ ಯುವಕನ ಮೇಲೆ‌ ಬಜರಂಗದಳ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ: ಪ್ರಕರಣ ದಾಖಲು

0

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತ್ತೆ ಲವ್ ಜಿಹಾದ್ ಪ್ರಕರಣ ನಡೆದಿದ್ದು, ಅನ್ಯಕೋಮಿನ ಯುವಕನ ಮೇಲೆ‌ ಬಜರಂಗದಳ ಕಾರ್ಯಕರ್ತರು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದೆ.

ಡ್ಯಾನ್ಸ್ ಮಾಸ್ಟರ್ ವಿರುದ್ದ ಲವ್ ಜಿಹಾದ್ ಆರೋಪವಿದ್ದು, ಅಪ್ರಾಪ್ತ ಬಾಲಕಿ ಜೊತೆ ಯುವಕ ಸುತ್ತಾಡುತ್ತಿದ್ದ ಎಂಬ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ.

ಡ್ಯಾನ್ಸ್ ಮಾಸ್ಟರ್ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದು,  ಭಜರಂಗದಳ ಜಿಲ್ಲಾ ಸಂಚಾಲಕ ಸಿ.ಡಿ.ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್, ಪ್ರಜ್ವಲ್ ಅವರನ್ನು ಬಂಧಿಸಲಾಗಿದೆ.

ಅಪ್ರಾಪ್ತ ಬಾಲಕಿಯ ಜತೆ ಸುತ್ತಾಡುತ್ತಿದ್ದ ಡ್ಯಾನ್ಸ್ ಮಾಸ್ಟರ್ ರೂಮನ್ ವಿರುದ್ದ ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಪೋಕ್ಸೋ ಪ್ರಕರಣ ದಾಖಲಾಗಿದೆ. ಬಾಲಕಿಯ ಜತೆ ರೂಮನ್ ಓಡಾಡಿದ ವಿಡಿಯೋ ಮತ್ತು ಪೋಟೋಗಳು ವೈರಲ್ ಆಗಿದೆ.

ರೂಮನ್ ಪ್ರತಿದೂರು ದಾಖಲಿಸಿದ್ದು, ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆಂದು ದೂರು ನೀಡಿದ್ದು, ಭಜರಂಗದಳ ಮತ್ತು ಅನ್ಯ ಕೋಮಿನ ಯುವಕನ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನಲೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಹಿಂದಿನ ಲೇಖನಬೆಳಗಾವಿ ವಿವಸ್ತ್ರ ಪ್ರಕರಣ: ವಿಚಾರಣಾಧೀನ ನ್ಯಾಯಾಲಯಕ್ಕೆ 1,100 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಸಿಐಡಿ
ಮುಂದಿನ ಲೇಖನಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಾಣ ಆಗಲಿದೆ: ಬಸವರಾಜ್ ಬೊಮ್ಮಾಯಿ