ಮನೆ ಸ್ಥಳೀಯ ಬಲೂನು, ಬೆಂಡು, ಬತ್ತಾಸು ದಸರಾದಲ್ಲಿ ಇವರ ಜೀವನ ಸಲೀಸು

ಬಲೂನು, ಬೆಂಡು, ಬತ್ತಾಸು ದಸರಾದಲ್ಲಿ ಇವರ ಜೀವನ ಸಲೀಸು

ದಸರಾ  ‌‌ವಿಜೃಂಭಣೆ, ಆಕರ್ಷಣೆ ಅಷ್ಟೇ ಅಲ್ಲ, ಬಹುಪಾಲು ಜನರ ಹೊಟ್ಟೆಪಾಡು ಕೂಡ

0

ಮೈಸೂರು: ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿರುವ ನೂರಾರು ಜನ ಬಲೂನು,ಬೆಂಡು,ಬತ್ತಾಸು,ಪೀಪಿ,ಬಾಂಬೆ ಮಿಠಾಯಿ, ಅಲಂಕಾರಿಕ ಆಭರಣಗಳನ್ನು ಮಾರುವ ಮೂಲಕ ತುತ್ತಿನ ಚೀಲಗಳನ್ನು ತುಂಬಿಸಿಕೊಳ್ಳುತ್ತಾ,ಸ್ವಲ್ಪ ಹಣವನ್ನ ಕುಟುಂಬಕ್ಕೂ ದಾಟಿಸುತ್ತಿದ್ದಾರೆ.

ಬೇರೆ ವ್ಯಾಪಾರಿಗಳಂತೆ ಇವರಿಗೆ ಶಾಶ್ವತ ನೆಲೆಯಿಲ್ಲ,ರಸ್ತೆ ಮೇಲೆ,ವಿವಿಧ ಸರ್ಕಲ್,ಜನನಬಿಡ ಪಾರ್ಕುಗಳು,ಅರಮನೆ ಮುಂಭಾಗ,ಪುಟ್ ಪಾತ್ ಗಳೇ ಇವರ ಪ್ರಮುಖ ವ್ಯಾಪಾರ ಕೇಂದ್ರಗಳು.

ಮಳೆ ಬಂದರಂತೂ ಇವರ ಫಜೀತಿ ದೇವರಿಗೇ ಪ್ರೀತಿ, ತಾವು ಮಳೆಯಿಂದ ತಪ್ಪಿಸಿಕೊಳ್ಳುವುದೋ ಅಥವ ತಮ್ಮ ಸಾಮಾನು ಸರಂಜಾಮುಗಳನ್ನು ಕಾಪಿಡುವುದೋ ಎಂಬ ಹೊಯ್ದಾಟ ಒಟ್ಟಾರೆ ಜೀವನ ಒಂದು ರೀತಿಯ ಸರ್ಕಸ್.

ಒಂದೆಡೆ ನೆಲೆ ನಿಲ್ಲುವವರಾದರೆ ಸರ್ಕಾರ ಏನಾದರು ಮಾಡಬಹುದು ಆದರೆ ಒಂದೆಡೆ ನೆಲೆ ನಿಂತರೆ ವ್ಯಾಪಾರ ಕಷ್ಟ ಹಾಗೂ ಇವರೊಂದು ರೀತಿಯ ಸಾಂಪ್ರದಾಯಿಕ ವಲಸೆಗಾರರು.

ಉದಾಹರಣೆಗೆ ಸರ್ಕಾರ ನರೇಗಾದಡಿ ಕೆಲಸ ನೀಡಿದರೂ ಕೆಲವೊಂದು ಸಮೂದಾಯಗಳು ಗುಳೇ ಹೋಗುವುದನ್ನೇ ಇಷ್ಟ ಪಡುತ್ತವೆ.

ಕೆಲ ಜಾತ್ರೆ,ಉತ್ಸವ,ಪರಿಶೆ,ಸಮಾವೇಶಗಳಲ್ಲಿ ಅತಿಹೆಚ್ಚು ಲಾಭ ಮಾಡಿಕೊಳ್ಳುವ ಇವರಿಗೆ ಕೆಲವೊಮ್ಮೆ ನಷ್ಟ ಎಂಬುದು ಇವರ ಬೆನ್ನು ಬಿಟ್ಟಿಲ್ಲ

ಕಳೆದ 12 ವರ್ಷಗಳಿಂದ ಕರ್ನಾಟಕದಲ್ಲಿಯೇ ಇದ್ದುಕೊಂಡು ವ್ಯಾಪಾರ ಮಾಡುತ್ತಿರುವ ರಾಮ್ ಬಾಬು ಕನ್ನಡವನ್ನ ಕರಗತ ಮಾಡಿಕೊಂಡಿದ್ದಾನೆ. ದಸರಾ ಎಂದರೆ ನಮ್ಮ ಮನೆಯ ಹಬ್ಬ ಇದ್ದಂಗೆ ಸಾರ್ ತಾಯಿ ದುವಾ ನನಗೆ ಯಾವ್ ವರ್ಷಾನೂ ಲಾಸ್ ಆಗಿಲ್ಲ ಈ ವ್ಯಾಪಾರದಿಂದಾನೇ ಹೆಂಡತಿ ಹಾಗೂ ಒಬ್ಬ ಮಗಳ ಜೀವನ ನಡೀತಿದೆ ಎಂದು ಸಂತಸದ ನಿಟ್ಟುಸಿರು ಬಿಟ್ಟರು.

ರಾಮ್ ಬಾಬುನಂತೆಯೇ ನೂರಾರು ಜನ ದಸರಾದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಮಳೆ,ಗಾಳಿ,ಬಿಸಿಲು ಎನ್ನದೇ ದಣಿವರಿಯದೇ ದುಡಿಯುವ ಇವರಿಗೆ ನಿಮ್ಮ ಹಾರೈಕೆ ಇರಲಿ