ಮನೆ ರಾಜ್ಯ ಗಾಳಿ ಸುದ್ದಿ ನಂಬದಿರಿ: ಬೆಂಗಳೂರು-ಮೈಸೂರು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ

ಗಾಳಿ ಸುದ್ದಿ ನಂಬದಿರಿ: ಬೆಂಗಳೂರು-ಮೈಸೂರು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ

0

ಮೈಸೂರು(Mysuru): ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದಿರುವ ಮಳೆಯಿಂದಾಗಿ ಸಾಕಷ್ಟು ಅವಾಂತರಗಳಾಗಿದ್ದು, ಬೆಂಗಳೂರಿನ ರಸ್ತೆಗಳು ಜಲಾವೃತವಾಗಿವೆ. ಆದರೆ ಮೈಸೂರು-ಬೆಂಗಳೂರು ಹೈವೇ ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಸಂಚಾರಕ್ಕೆ ಮುಕ್ತವಾಗಿದೆ.

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಆರಂಭವಾದ ಮಳೆ ಸೋಮವಾರ ಬೆಳಗಿನ ಜಾವದವರೆಗೂ ಸುರಿದಿದೆ. ನಿರಂತರವಾಗಿ ಸುರಿದ ಭಾರೀ ಪ್ರಮಾಣದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳಲ್ಲೂ ನೀರು ನಿಂತಿದೆ. ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಆದರೆ ಈ ಸುದ್ದಿ ನಡುವೆ ಬೆಂಗಳೂರು- ಮೈಸೂರು ರಸ್ತೆ ಬಂದ್ ಆಗಿದೆ ಎಂಬ ಗಾಳಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು, ಅಂತಹ ಯಾವುದೇ ಘಟನೆಗಳು ನಡೆದಿಲ್ಲ. ಬೆಂಗಳೂರು- ಮೈಸೂರು ಹೈವೇ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರು ನಿಶ್ಚಿಂತೆಯಿಂದ ಸಂಚರಿಸಬಹುದಾಗಿದೆ.

ಹಿಂದಿನ ಲೇಖನಜೆಡಿಎಸ್ ಪಕ್ಷದವರೇ ಮೇಯರ್ ಆಗಲಿದ್ದಾರೆ: ಜೆಡಿಎಸ್ ಎಂಎಲ್ ಸಿ ಮಂಜೇಗೌಡ
ಮುಂದಿನ ಲೇಖನಶಿಕ್ಷಕರು ಸಮಾಜದ ಆಧಾರ ಸ್ತಂಭಗಳು: ಪ್ರೊ.ಜಿ.ಹೇಮಂತ್ ಕುಮಾರ್