ಮನೆ ಅಪರಾಧ ಸಂಸದ ಜಿಗಜಿಣಗಿ ಮಾಜಿ ಕಾರು ಚಾಲಕನ ಬರ್ಬರ ಹತ್ಯೆ

ಸಂಸದ ಜಿಗಜಿಣಗಿ ಮಾಜಿ ಕಾರು ಚಾಲಕನ ಬರ್ಬರ ಹತ್ಯೆ

0

ವಿಜಯಪುರ(Vijayapura): ಸಂಸದ ರಮೇಶ ಜಿಗಜಿಣಗಿ ಅವರ ಮಾಜಿ ಕಾರು ಚಾಲಕ ಮಲ್ಲಿಕಾರ್ಜುನ ದೊಡಮನಿ (43) ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಇಲ್ಲಿನ ಅಲಕುಂಟೆ ‌ನಗರದಲ್ಲಿ ಬುಧವಾರ ತಡ ರಾತ್ರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸಂಸದ ರಮೇಶ ಜಿಗಜಿಣಗಿ ಅವರ ಕಾರು ಚಾಲಕನಾಗಿ ಕೆಲಸ ಮಾಡಿದ್ದ ದೊಡಮನಿ, ಕಳೆದ ಮೂರು ವರ್ಷದ ಹಿಂದೆ ಕೆಲಸ ಬಿಟ್ಟು, ಅಟೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದರು.

ಹಣಕಾಸಿನ‌ ವ್ಯವಹಾರವೇ ಮಲ್ಲಿಕಾರ್ಜುನ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಇತ್ತೀಚೆಗೆ ಸರಿಯಾಗಿ ಕೆಲಸಕ್ಕೆ ಹೋಗದೇ ಅಲಾದಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.‌

ನಗರದ ಬಾಡರ ಓಣಿಯ ನಿವಾಸಿಯಾಗಿದ್ದ ದೊಡಮನಿ ನಿನ್ನೆ ರಾತ್ರಿ ಸಹೋದರಿಯನ್ನು ಅವರ ಮನೆಗೆ ಬಿಟ್ಟು, ಮರಳಿ ಬರುವಾಗ ಕೊಲೆಯಾಗಿದೆ.

ಸ್ಥಳಕ್ಕೆ ‌ಎಎಸ್ಪಿ ಶಂಕರ ಮಾರಿಹಾಳ, ಆದರ್ಶನಗರ ಪಿಎಸೈ ಯತೀಶ್, ಶ್ವಾನದಳದೊಂದಿಗೆ ಭೇಟಿ ಪರಿಶೀಲನೆ ನಡೆಸಿದರು. ಆದರ್ಶ ನಗರ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ನಡೆದಿದೆ.