ಮನೆ ರಾಜ್ಯ ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ: ರಾಜ್ಯಪಾಲ, ಸಿಎಂ ಸೇರಿ ಗಣ್ಯರಿಂದ ಸ್ವಾಗತ

ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ: ರಾಜ್ಯಪಾಲ, ಸಿಎಂ ಸೇರಿ ಗಣ್ಯರಿಂದ ಸ್ವಾಗತ

0

ಕಲಬುರಗಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲ್ಯಾಣ ಕರ್ನಾಟಕ ಜಿಲ್ಲೆ ಕಲಬುರಗಿಗೆ ಬಂದಿಳಿದಿದ್ದಾರೆ.

ನವದೆಹಲಿಯಿಂದ ವಿಶೇಷ ವಿಮಾನ ಮೂಲಕ ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ ಸಿಂಗ್, ಕಂದಾಯ ಸಚಿವ ಆರ್. ಅಶೋಕ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಸೇರಿದಂತೆ ಪ್ರಮುಖರು ಪ್ರಧಾನಿ ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ತದ ನಂತರ ನೇರವಾಗಿ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಯಾದಗಿರಿ ಜಿಲ್ಲೆಯ ಕೊಡೆಕಲ್ ಗೆ ತೆರಳಿರುವ ಮೋದಿ, ನಂತರ ಮಧ್ಯಾಹ್ನ 2 ಗಂಟೆ ಸಮಾರಿಗೆ ಮಳಖೇಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ಭಾಗವಹಿಸಲಿದ್ದಾರೆ.

ಇಲ್ಲಿಂದ ಪ್ರಧಾನಿಯವರು ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕು ಕೊಕೊಡೆಕಲ್‌ ಹೆಲಿಪ್ಯಾಡ್‌ಗೆ ತೆರಳಿದ್ದಾರೆ. ಮಾರ್ಗದುದ್ದಕ್ಕೂ ಎರಡೂ ಕಡೆ ಲಕ್ಷಾಂತರ ಮಂದಿ ಮೋದಿಯವರ ಸ್ವಾಗತಕ್ಕೆ ಜಮಾಯಿಸಿದ್ದಾರೆ. ಅವರತ್ತ ನಗುತ್ತಾ, ಕೈಬೀಸುತ್ತಾ ಪ್ರಧಾನಿ ಮೋದಿಯವರು ಸಾಗುತ್ತಿದ್ದಾರೆ.

ಕೊಡೆಕಲ್ ತಾಲ್ಲೂಕಿನಲ್ಲಿ ಪ್ರಧಾನಿಯವರು ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಕಾಮಗಾರಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮ ನಡೆಯುವ ವೇದಿಕೆಯ ಮುಂಭಾಗ ಪ್ರಧಾನಿಯವರನ್ನು ಸ್ವಾಗತಿಸಲು ಕಲಾತಂಡಗಳು, ಸಾಂಪ್ರದಾಯಿಕ ಉಡುಗೆ ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಸಜ್ಜಾಗಿದ್ದಾರೆ.

ಹಿಂದಿನ ಲೇಖನಸಂಸದ ಜಿಗಜಿಣಗಿ ಮಾಜಿ ಕಾರು ಚಾಲಕನ ಬರ್ಬರ ಹತ್ಯೆ
ಮುಂದಿನ ಲೇಖನಮದ್ಯ ಖರೀದಿ ವಯಸ್ಸಿನ ಮಿತಿ ಕಡಿತದ ನಿರ್ಧಾರದಿಂದ ಹಿಂದೆ ಸರಿದ ಸರ್ಕಾರ