ಧಾರವಾಡ: ಇಲ್ಲಿಯ ಜಿಲ್ಲಾಧಿಕಾರಿಗಳ ಕಾರ್ಯಾಲಯ ಆವರಣದಲ್ಲಿ ಕೆಎಸ್ ಡಬ್ಯೂಎಎಸ್ ಕಂಟ್ರೋಲ್ ರೂಮಿನ ಜನರೇಟರ್ ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಆಗಿರುವ ಘಟನೆ ನಡೆದಿದೆ.
ಡಿ.10 ರಿಂದ ಡಿ.17 ರವರೆಗಿನ ಅವಧಿಯೊಳಗೆ 3,500 ರೂ. ಮೌಲ್ಯದ ಒಂದು ಬ್ಯಾಟರಿ ಕಳ್ಳತನವಾಗಿದೆ. ಈ ಕುರಿತಂತೆ ನೋಡಲ್ ಅಧಿಕಾರಿ ವಿನಯ ಮುದೆಣ್ಣನವರ ಉಪನಗರ ಪೊಲೀಸ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.