ಮನೆ ವ್ಯಕ್ತಿತ್ವ ವಿಕಸನ ಧೈರ್ಯಶಾಲಿಯಾಗಿರಿ

ಧೈರ್ಯಶಾಲಿಯಾಗಿರಿ

0

1975 ಫೆಬ್ರವರಿಯಲ್ಲಿ ಭೀಕರ ಮತ್ತು ದುರಂತಮಯ ಅಪಘಾತ ಸಂಭವಿಸಿತ್ತು. ಲಂಡನ್ನ ಮುರ್ಗೆಟ್ ಸ್ಟೇಷನ್ ಬಳಿ ಸುರಂಗ ಮಾರ್ಗದಲ್ಲಿ ರೈಲು ಕಲ್ಲಿನ ಗೋಡೆಗೆ ಡಿಕ್ಕಿಯಾಗಿ 41 ಜನ ಸಾವನ್ನಪ್ಪಿದರು. ಈ ಅಪಘಾತದಲ್ಲಿ ಮಾರ್ಗರೇಟ್ ಎಂಬ 19ವರ್ಷ ವಯಸ್ಸಿನ ಪೊಲೀಸ್ ಮಹಿಳೆಯು ಸಹ ಗಾಯಗೊಂಡಿದ್ದಳು. ನೆಲದ ಮೇಲೆ ಕುಳಿತಿದ್ದ ಆಕೆಗೆ ಒಂದು ಕಾಲು ತನ್ನ ದೇಹದ ಕೆಳಗೆ ಸಿಕ್ಕಿಕೊಂಡಿರುವುದನ್ನು  ಅರಿವಾಯಿತು. ಮತ್ತೊಬ್ಬ ವ್ಯಕ್ತಿಯು ಆಕೆಯ ಮೇಲೆ ಬಿದ್ದಿದ್ದನು. ಅವರಿಬ್ಬರಲ್ಲಿ ಯಾರು ಇನ್ನೊಬ್ಬರಿಗೆ ತೊಂದರೆ ಮಾಡದಂತೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಕತ್ತಲೆಯಲ್ಲಿ ತಮ್ಮನ್ನು ಸುತ್ತುವರೆದಿದ್ದ ಅನ್ಯರ ಶವಗಳ ರಾಶಿಯ ನಡುವಿನಿಂದ ಮೇಲೇಳಲು ಆ ಮನುಷ್ಯನಿಗೆ ನೆರವಾಗಲು ಆಕೆಯು ನಿರ್ಧರಿಸಿದಳು.

“ನೀನು ಬಹಳ ಧೈರ್ಯಶಾಲಿಯಾಗಿದ್ದೀಯಾ”, ಎಂದು ಆ ವ್ಯಕ್ತಿ ಹೇಳಿದನು. “ನಾನು ಹಾಗೆ ಇರಬೇಕು, ನಾನೊಬ್ಬ ಪೊಲೀಸ್ ಮಹಿಳೆ”, ಎಂದು ಆಕೆ ಉತ್ತರಿಸಿದಳು. ಸ್ವಲ್ಪತಡವಾಗಿಯೇ ಸ್ಥಳಕ್ಕೆ ತಲುಪಿದ ಅಗ್ನಿಶಾಮಕ ಸಿಬ್ಬಂದಿ ಅವರನ್ನು ಹೊರಗೆಳೆಯಲು ಪ್ರಯತ್ನಿಸಿದರು. ಆದರೆ ಮಾರ್ಗರೇಟ್ ನ ಎಡಗಾಲು ದೊಡ್ಡ ಉಕ್ಕಿನ ತೊಲೆಯ ಕೆಳಗೆ ಸಿಕ್ಕಿಕೊಂಡಿದ್ದು, ಕೊನೆಗೆ ಅವರು ಆಸ್ಪತ್ರೆ ತಲುಪುವಷ್ಟರಲ್ಲಿ ಮಾರ್ಗರೇಟ್ ದೇಹದಿಂದ ಬಹಳ ರಕ್ತ ಸೋರಿಹೋಗಿತ್ತು. ವೈದ್ಯರು ಆಕೆಯ ಕಾಲನ್ನು ಕತ್ತರಿಸುವುದು ಸೂಕ್ತವೆಂದು ಸೂಚಿಸಿದರು. ಅದರಂತೆ ಆಕೆಯ ಎಡಪದ ತೆಗೆಯಲಾಯಿತು. ಆಕೆಯ ಪರಿಚಯಸ್ತರು ಇದನ್ನು ಕೇಳಿ ಗಾಬರಿಗೊಂಡು ಅವಳ ದು ಸ್ಥಿತಿಗೆ ಮರುಗಿದರು.

ಪ್ರಶ್ನೆಗಳು :-

1.ಅವಳ ಮುಂದೇನು ಮಾಡಿದಳು ? 2.ಈ ಕಥೆಯ ಪರಿಣಾಮವೇನು?

ಉತ್ತರಗಳು :-

1.ಈ ಭೀಕರ ದುರಂತದ ನಡುವೆಯೂ ಆಕೆ ತನ್ನ ನಗುವಿನ ಮತ್ತು ಹಾಸ್ಯದ ಹೊನಲು ಹರಿಸಲು ಸಾಮರ್ಥ್ಯದಿಂದ ಸುತ್ತಲಿದ್ದ ಎಲ್ಲರನ್ನು ಖುಷಿಪಡಿಸುತ್ತಿದ್ದಳು. ಕೇವಲ ಎರಡೇ ದಿನಗಳಲ್ಲಿ ಆಕೆ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಕುಳಿತು ಭೇಟಿಯಾಗಲು ಬಂದವರೊಂದಿಗೆ ಉತ್ಸಾಹದಿಂದ ಹರಟುತ್ತಿದ್ದಳು. ಆಕೆ ಧೈರ್ಯವನ್ನು ಕಂಡು ಜಗತ್ತಿನಲ್ಲಿ ಜನ ಅಪಾರ ಮೆಚ್ಚುಗೆ ಸೂಚಿಸಿದರು. ಉಡುಗೊರೆಗಳು ಮತ್ತು ಶುಭಾಶಯಗಳು ಪತ್ರಗಳಿಗಿಂತಲೂ ಹೆಚ್ಚಾಗಿ ಆಕೆ ಪ್ರತಿಯೊಬ್ಬರ ಹೃದಯವನ್ನು ಗೆದ್ದಳು!

2. ಭಯ ಮನಸ್ಸಿನಲ್ಲಿರುತ್ತದೆ. ಭಯವು ನಾವು ಧೈರ್ಯವಾಗಿ ದಿಟ್ಟಿಸಿ ನೋಡುವುದರಿಂದ ನಿಜವಾದ ಧೈರ್ಯ ಬರುತ್ತದೆ. ಮಾರ್ಗರೇಟ್ ಜಗತ್ತಿನಲ್ಲಿ ಅನೇಕ ಜನರಲ್ಲಿ ಸ್ಪೂರ್ತಿತುಂಬಿ ನಿಜವಾದ ಮಾದರಿ ಮಹಿಳೆಯಾದಳು. ಆಕೆ ತನ್ನ ದುರ್ವಿಧಿಯನ್ನು ಹಳೆಯುತ್ತಾ ಕುಳಿತುಕೊಳ್ಳಬಹುದಿತ್ತು. ಆದರೆ, ಅವಳು ಹಾಗೆ ಮಾಡಲಿಲ್ಲ. ತಮ್ಮ ಜೀವನ ದುಃಖಮಯ ಮತ್ತು ಅಸಹಾಯಕ ಎಂದು ಕೊರಗುವ ಜನರಿಗೆಲ್ಲ ಆಕೆಯ ಕಥೆ ಒಂದು ಪಾಠವಾಗಿದೆ.

ಹಿಂದಿನ ಲೇಖನಮೈಸೂರು ದಸರಾ: ಪ್ರವಾಸಿಗರಿಗೆ ಕೆಎಸ್ ಆರ್ ಟಿಸಿಯಿಂದ ವಿಶೇಷ ಪ್ಯಾಕೇಜ್
ಮುಂದಿನ ಲೇಖನಅ.17 ರಂದು ಚಾಮರಾಜನಗರ ದಸರಾಗೆ ಚಾಲನೆ