ಮನೆ ಸಾಹಿತ್ಯ ಇತರರ ಸೇವೆಯಲ್ಲಿ ತಲ್ಲಿನರಾಗಿ

ಇತರರ ಸೇವೆಯಲ್ಲಿ ತಲ್ಲಿನರಾಗಿ

0

ಕೆಲವು ವರ್ಷಗಳ ಹಿಂದೆ ಒಬ್ಬ ರಬ್ಬಿ( ಯಹೂದಿಗಳ ಗುರು )ಪ್ರತಿವಾರ ಸಂಜೆಯ (ಸಬ್ಬಾತ್) ಸಂಜೆ ಎಲ್ಲೋ ಹೊರಟು ಹೋಗುತ್ತಿದ್ದರು. ಇದನ್ನು ನೋಡಿದ ಅವರ ಮಠದವರಿಗೆ ಅವರ ವರ್ತನೆಯ ಬಗ್ಗೆ ಸಂದೇಹ ಉಂಟಾಯಿತು.ಇದರ ಬಗ್ಗೆ ತಿಳಿಯಲು ಒಬ್ಬ ಸದಸ್ಯನನ್ನು ನೇಮಿಸಿ ಅವರನ್ನು ಹಿಂಬಾಲಿಸಿ ಹೋಗಲು ಹೇಳಲಾಯಿತು. ರಬ್ಬಿಯವರು ಗೌಪ್ಯವಾಗಿದೆ ದೇವರನ್ನು ಭೇಟಿ ಮಾಡುತ್ತಿದ್ದಾರೆಂಬ ಸಂದೇಹ ಅವರಿಗಿತ್ತು. ಅವರನ್ನು ಹಿಂಬಾಲಿಸಿದ ವ್ಯಕ್ತಿಯು ರಬ್ಬಿಯವರು ರೈತರ ವೇಷದಲ್ಲಿ ಲಕ್ಟ ಹೊಡೆದ ಕೆಳವರ್ಗದ ಹೆಂಗಸರೊಬ್ಬಳ ಗುಡಿಸಿಲಿಗೆ ಗುಡಿಸಲಿಗೆ ಹೋಗಿ ಅವಳ ಮನೆಯನ್ನು ಶುಚಿಗೊಳಿಸಿ ಅವಳಿಗಾಗಿ ಶಬ್ಬಾತ್ ಊಟವನ್ನು ತಯಾರಿಸುವುದನ್ನು ನೋಡಿದನು.

Join Our Whatsapp Group

ಆತ ವಾಪಸ್ಸಾದ  ಬಳಿಕ, “ರಬ್ಬಿ ಯವರು ಎಲ್ಲಿಗೆ ಹೋಗುತ್ತಾರೆ?ಅವರು ಸ್ವರ್ಗಕ್ಕೆ ಹೋಗಿದ್ದರೆ?” ಎಂದು ಅವನನ್ನು ಪ್ರಶ್ನಿಸಿದಾಗ ಅವನು ಹೀಗೆ ಉತ್ತರಿಸಿದನು:

ಪ್ರಶ್ನೆಗಳು

 1.ಆತ ಏನು ಹೇಳಿದನು?

  2.ಈ ಕಥೆಯ ನೀತಿಯೇನು?

ಉತ್ತರಗಳು

 1.“ಇಲ್ಲ, ಸ್ವರ್ಗಕ್ಕೂ ಮಿಗಿಲಾದುದ್ದು” ಎಂದನು.

 2.ಇತರರ ಸೇವೆಯಲ್ಲಿ ನಿಮ್ಮ ಬದುಕನ್ನು ಕಳೆಯಿರಿ.ಇದು ಸ್ವರ್ಗಕ್ಕೆ ಹೋಗುವುದಕ್ಕಿಂತ ಬಹಳ ಉನ್ನತಮವಾದದ್ದು.ಈ ಸಂದರ್ಭದಲ್ಲಿ ಕವಿ ರಾಲ್ಫ್ ವಾಲ್ ಡೊ ಟ್ರೈನರ ಕವಿತೆಯನ್ನು ಉಲ್ಲೇಖಿಸುವುದು ಸೂಕ್ತ :

“ ಓ, ಸಹೋದರ, ನಿನ್ನ ಸ್ವಾರ್ಥಕ್ಕಾಗಿ,  ಮಹಾನತೆಯನ್ನು ಅರಸತ್ತಿದ್ದಿರುವೆಯಾ.

 ಋತುಗಳು ಮತ್ತು ವರ್ಷಗಳಂತೆ ಅವೂ ಉರುಳುತ್ತವೆ.  ನೈಜ ಹಾಗೂ ಶಾಶ್ವತವಾಗಿ ನಿನೆಂದೂ ಹೇಳಲಾಗದು.  ಆದರೆ ಸ್ವಾರ್ಥ ಮರೆತ, ನಿಯಮ ಅರಿತವರೆಲ್ಲರೂ ಅರಿತಿದ್ದಾರೆ.  ನಾಯಕನೇ ಹೊರತು ಸ್ವಾರ್ಥಿಯಲ್ಲ ಕೊನೆಗೆ ಜಯಿಸುವವನು ಎಂದು.

 ಹೋಗು ನಿನ್ನ ಬದುಕನ್ನು ಇತರರ ಸೇವೆಯಲ್ಲಿ ಕಳೆಯುವಂತಾಗು, ಹೋ ಅಪರೂಪದ ಮಹಾನತೆ ಮತ್ತು ಭವ್ಯತೆಯಲ್ಲಿ  ನೀನು ಸ್ವರ್ಗಕ್ಕಿಂತ ಮಿಗಿಲಾದುದನ್ನು ಗಳಿಸುವೆ.