ಕಷ್ಟದಲ್ಲಿ ಸಹಾಯ ಮಾಡುವವರೇ ಎಲ್ಲಾ ಕಾಲಕ್ಕೂ ಸ್ನೇಹಿತರಾಗಿರುತ್ತಾರೆಂದು ಹಲವು ಬಾರಿ ಹೇಳಲಾಗಿದೆ.ಹಲವು ವರ್ಷಗಳ ಹಿಂದೆ ನಾಜಿ ಕಿರುಕುಳಕ್ಕೆ ಒಳಗಾಗಿ ಯಾತನಾ ಶಿಬಿರದಲ್ಲಿ ಒಟ್ಟಿಗಿದ್ದ ಇಬ್ಬರು ಸ್ನೇಹಿತರು ಭೇಟಿಯಾದರು. ಲೋಕ ಭಿರಾಮವಾಗಿ ಮಾತನಾಡುತ್ತಾ ಇಬ್ಬರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಲು ಆರಂಭಿಸಿದರು. ಅವರಲ್ಲಿ ಒಬ್ಬ, “ನಾನು ಈ ಇಡಿ ಸಂಗತಿಯಿಂದ ಹೊರಬಂದಿಲ್ಲ. ನನಗೆ ಇನ್ನೂ ನಾಜಿಯವರ ಬಗ್ಗೆ ದ್ವೇಷವಿದೆ” ಎಂದ.
ಪ್ರಶ್ನೆಗಳು:-
- ಆಗ ಇನ್ನೊಬ್ಬ ಏನು ಹೇಳಿದ?
- ಈ ಕಥೆಯ ನೀತಿಯೇನು? ಉತ್ತರಗಳು:-
- “ಹಾಗಾದರೆ ನೀನು ಇನ್ನೂ ಅವರ ಬಂಧನದಲ್ಲಿರುವೆ” ಎಂದನು.
- ದ್ವೇಷವು ನಮ್ಮನ್ನು ಬಂಧಿಸುತ್ತದೆ. ಕ್ಷಮೆಯು ನಮ್ಮನ್ನು ಮುಕ್ತಿಗೊಳಿಸುತ್ತದೆ.ಒಮ್ಮೆ ನಾವು ನಮ್ಮ ಶತ್ರುಗಳನ್ನು ಕ್ಷಮಿಸಿದರೆ ನಮ್ಮಲ್ಲಿ ಶಾಂತ ಭಾವ ಉಂಟಾಗುತ್ತದೆ ನಾವು ನಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಲು ಸನ್ನದ್ಧರಾಗುತ್ತೇವೆ ದ್ವೇಷವು ಒತ್ತಡ ಹಾಗೂ ಆತಂಕವನ್ನು ಉಂಟುಮಾಡುತ್ತದೆ. ನಮ್ಮ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.