ನವದೆಹಲಿ: ಹೆಂಡತಿಯನ್ನು ನೋಡಿಕೊಳ್ಳುವುದು ಗಂಡನ ನೈತಿಕ ಹೊಣೆಗಾರಿಕೆಯಾಗಿದ್ದು, ಗಂಡ ವೃತ್ತಿಪರ ಭಿಕ್ಷುಕನಾಗಿದ್ದರೂ ಕೂಡ ಆತ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಡೈವೋರ್ಸ್ ವಿಚಾರಣೆಯ ಹಂತದಲ್ಲಿರುವಾಗ ಹೆಂಡತಿಗೆ ತಿಂಗಳಿಗೆ 5,500 ರೂ. ಜೀವನಾಂಶವನ್ನು ನೀಡುವಂತೆ ಗಂಡನಿಗೆ ಕೆಳ ಹಂತದ ನ್ಯಾಯಾಲಯವು ಆದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಗಂಡ ಹೈಕೋರ್ಟ್‌ಗೆ ಮೊರೆ ಹೋಗಿದ್ದ. ಈ ಕುರಿತು ವಿಚಾರಣೆ ನಡೆಸುವಾಗ ಹೈಕೋರ್ಟ್, ಭಿಕ್ಷುಕನಾದರೂ ಹೆಂಡತಿಗೆ ಜೀವನಾಂಶವನ್ನು ನೀಡುವುದ ನೈತಿಕ ಕೆಲಸವಾಗಿದೆ ಎಂದು ಹೇಳಿದೆ.
ಪತಿ ಒಬ್ಬ ಸಮರ್ಥ ವ್ಯಕ್ತಿಯಾಗಿರುತ್ತಾನೆ. ಇತ್ತೀಚಿನ ದಿನಗಳಲ್ಲಿ, ಒಬ್ಬ ಕಾರ್ಮಿಕ ಕೂಡ ದಿನಕ್ಕೆ 500 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಾನೆ ಎಂದು ನ್ಯಾಯಾಲಯವು ಹಣದುಬ್ಬರದ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಹೇಳಿತು. ಹಣದುಬ್ಬರ ಏರಿಕೆಯಿಂದಾಗಿ ಎಲ್ಲವೂ ದುಬಾರಿಯಾಗಿದೆ. ನಿರ್ವಹಣಾ ವೆಚ್ಚವನ್ನು ನೀಡಬೇಕು ಎಂದು ಹೇಳಿತು.
ಮಹಿಳೆಯೊಬ್ಬಳು ಡಿವೋರ್ಸ್ ಬಯಸಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಅರ್ಜಿ ಸಲಿಸಿದ್ದರು. ಆಕೆ ತನ್ನ ಪತಿಯಿಂದ ತಿಂಗಳಿಗೆ 15,000 ರೂ. ದಾವೆ ವೆಚ್ಚದ ಜೊತೆಗೆ 11,000 ಜೀವನಾಂಶವನ್ನು ನೀಡುವಂತೆ ಮನವಿ ಮಾಡಿದ್ದಳು.
ಆಗ ಕೋರ್ಟ್, ದಾವೆ ವೆಚ್ಚವಾಗಿ 5,500 ರೂ. ಹಾಗೂ ಪ್ರತಿ ವಿಚಾರಣೆ ವೇಳೆ 500 ರೂ. ನೀಡುವಂತೆ ಗಂಡನಿಗೆ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್’ಗೆ ಹೋಗಿದ್ದ.