ಮನೆ ಕಾನೂನು ಸಂಪುಟ ದರ್ಜೆ ಸಚಿವರಿಗೆ ದೊರಕುವ ಎಲ್ಲಾ ಸೌಲಭ್ಯಗಳು ವಿರೋಧ ಪಕ್ಷದ ನಾಯಕರಿಗೆ ಲಭ್ಯ

ಸಂಪುಟ ದರ್ಜೆ ಸಚಿವರಿಗೆ ದೊರಕುವ ಎಲ್ಲಾ ಸೌಲಭ್ಯಗಳು ವಿರೋಧ ಪಕ್ಷದ ನಾಯಕರಿಗೆ ಲಭ್ಯ

0

ಕೋಲ್ಕತಾ: ಸಂಪುಟ ದರ್ಜೆ ಸಚಿವರಿಗೆ ಸಿಗುವ ಎಲ್ಲಾ ಸ್ಥಾನಮಾನಗಳೂ ವಿರೋಧ ಪಕ್ಷದ ನಾಯಕರಿಗೆ ದಕ್ಕುತ್ತವೆ ಎಂದು ಗುರುವಾರ ಕಲ್ಕತ್ತಾ ಹೈಕೋರ್ಟ್‌ ಹೇಳಿದೆ.

ತಮಗೆ ಕಲ್ಪಿಸಿರುವ ಭದ್ರತಾ ವ್ಯವಸ್ಥೆಯಲ್ಲಿ ಸಮಸ್ಯೆಯಿದೆ ಎಂದು ಆಕ್ಷೇಪಿಸಿ ಬಿಜೆಪಿ ನಾಯಕ ಮತ್ತು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಜಶೇಖರ ಮಂಥ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಅರ್ಜಿದಾರರು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದು, ಸಂಪುಟ ದರ್ಜೆ ಸಚಿವರಿಗೆ ಸಿಗುವ ಎಲ್ಲಾ ಸ್ಥಾನಮಾನಗಳಿಗೂ ಅವರು ಅರ್ಹವಾಗಿರುತ್ತಾರೆ ಎಂಬುದನ್ನು ಪ್ರತಿವಾದಿಗಳು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ತಮ್ಮ ಭದ್ರತಾ ವ್ಯವಸ್ಥೆಯಲ್ಲಿರುವ ಲೋಪಗಳ ಲಾಭ ಪಡೆದು ಮೂರನೇ ವ್ಯಕ್ತಿಗಳು ನಿರಂತರವಾಗಿ ತಮ್ಮ ಕೆಲಸಕ್ಕೆ ಚ್ಯುತಿ ಉಂಟು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ಅಧಿಕಾರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

“ಅರ್ಜಿದಾರರು ʼಝಡ್‌ʼ ವಿಭಾಗದ ಭದ್ರತೆಗೆ ಅರ್ಹರಾಗಿದ್ದಾರೆ. ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಖಾಸಗಿತನ ಉಲ್ಲಂಘಿಸುವ ವಿಚಾರದತ್ತ ಸಿಆರ್‌ಪಿಎಫ್‌ ಗಮನಹರಿಸಬೇಕು. ಸಿಸಿಟಿವಿ ಅಳವಡಿಕೆ ಮತ್ತು ಅರ್ಜಿದಾರರ ಖಾಸಗಿತನದ ವಿಚಾರದ ಕುರಿತು ಸಿಆರ್‌ಪಿಎಫ್‌ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಸಭೆ ನಡೆಸಿ ಪರಿಹರಿಸಬೇಕು” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಹಿಂದಿನ ಲೇಖನಗಂಗೂಲಿ ವ್ಯಾಜ್ಯ: ನ್ಯಾಯಾಲಯದ ಆದೇಶ ಪಾಲಿಸದ ಕಂಪನಿಗಳಿಗೆ ಬಾಂಬೆ ಹೈಕೋರ್ಟ್ ನಿಂದ ಶೋಕಾಸ್ ನೋಟಿಸ್
ಮುಂದಿನ ಲೇಖನಮೈಸೂರು: ಸೋಮವಾರದಿಂದ ಶಾಲೆ ಪ್ರಾರಂಭ