ಮನೆ ಉದ್ಯೋಗ BEL ಬೆಂಗಳೂರು ಘಟಕದಲ್ಲಿ 428 ಹುದ್ದೆಗಳ ನೇಮಕ: ಅರ್ಜಿ ಹಾಕಿ

BEL ಬೆಂಗಳೂರು ಘಟಕದಲ್ಲಿ 428 ಹುದ್ದೆಗಳ ನೇಮಕ: ಅರ್ಜಿ ಹಾಕಿ

0

ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್, ಬೆಂಗಳೂರು ಕಾಂಪ್ಲೆಕ್ಸ್’ನಲ್ಲಿ ಅಗತ್ಯ ಇರುವ ಪ್ರಾಜೆಕ್ಟ್ ಇಂಜಿನಿಯರ್ ಹಾಗೂ ಟ್ರೈನಿ ಇಂಜಿನಿಯರ್ ಹುದ್ದೆಗಳ ಭರ್ತಿಗೆ ನೇಮಕಾತಿ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.

Join Our Whatsapp Group

ಬಿಇ, ಬಿ.ಟೆಕ್, ಬಿಎಸ್ಸಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಪ್ರಾಜೆಕ್ಟ್ ಇಂಜಿನಿಯರ್-1 ವಿಭಾಗವಾರು ಹುದ್ದೆಗಳ ವಿವರ

ಇಲೆಕ್ಟ್ರಾನಿಕ್ಸ್ – 164

ಮೆಕ್ಯಾನಿಕಲ್ – 106

ಕಂಪ್ಯೂಟರ್ ಸೈನ್ಸ್ – 47

ಇಲೆಕ್ಟ್ರಿಕಲ್ – 07

ಕೆಮಿಕಲ್ – 01

ಏರೋಸ್ಪೇಸ್ ಇಂಜಿನಿಯರಿಂಗ್ – 02

ಟ್ರೈನಿ ಇಂಜಿನಿಯರ್-1 ವಿಭಾಗವಾರು ಹುದ್ದೆಗಳ ವಿವರ

ಇಲೆಕ್ಟ್ರಾನಿಕ್ಸ್ : 100

ಏರೋಸ್ಪೇಸ್ ಇಂಜಿನಿಯರಿಂಗ್ : 1

ವಿದ್ಯಾರ್ಹತೆ

ಎರಡು ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಬಿಇ / ಬಿ.ಟೆಕ್ / ಬಿಎಸ್ಸಿ ಅನ್ನು ಪಾಸ್ ಮಾಡಿರಬೇಕು. ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಕನಿಷ್ಠ 02 ವರ್ಷ ಸಂಬಂಧಿಸಿದ ಇಂಡಸ್ಟ್ರಿಯ ಪೋಸ್ಟ್ ಕ್ವಾಲಿಫಿಕೇಶನ್ ಕಾರ್ಯಾನುಭವ ಹೊಂದಿರಬೇಕು.

ಹುದ್ದೆಯ ವಿಧ : ಗುತ್ತಿಗೆ ಆಧಾರಿತ ನೇಮಕಾತಿ.

ವಯಸ್ಸಿನ ಅರ್ಹತೆಗಳು

ಟ್ರೈನಿ ಇಂಜಿನಿಯರ್ ಹುದ್ದೆಗೆ ಗರಿಷ್ಠ 28 ವರ್ಷ ಮೀರಿರಬಾರದು.

ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಗರಿಷ್ಠ 32 ವರ್ಷ ಮೀರಿರಬಾರದು.

ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಹಿಂದುಳಿದ ವರ್ಗದವರಿಗೆ 3 ವರ್ಷ, ಎಸ್’ಸಿ/ಎಸ್’ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಟ್ರೈನಿ ಇಂಜಿನಿಯರ್ ಮಾಸಿಕ ಸಂಭಾವನೆ

ಮೊದಲನೇ ವರ್ಷ ರೂ.30,000.

2ನೇ ವರ್ಷ ರೂ.35,000.

3ನೇ ವರ್ಷ ರೂ.40,000.

ಪ್ರಾಜೆಕ್ಟ್ ಇಂಜಿನಿಯರ್ ಮಾಸಿಕ ಸಂಭಾವನೆ

ಮೊದಲನೇ ವರ್ಷ ರೂ.40,000.

2ನೇ ವರ್ಷ ರೂ.45,000.

3ನೇ ವರ್ಷ ರೂ.50,000.

4ನೇ ವರ್ಷ ರೂ.55,000.

ಸೆಲೆಕ್ಷನ್ ಪ್ರಕ್ರಿಯೆ ಹೇಗಿರುತ್ತದೆ?

ಅಪ್ಲಿಕೇಶನ್ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ

ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ: ರೂ.400

ಟ್ರೈನಿ ಇಂಜಿನಿಯರ್ ಹುದ್ದೆ : ರೂ.150

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್ ವಿಳಾಸ : https://jobapply.in/bel2023maybng/

ಆನ್’ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 18-05-2023