ಶ್ಲೋಕ :
ಕನ್ಯಾಭೌರ್ಭೇರಿ ಶಂಖು | ದಧೀ ಫಲ ಕುಸುಮಂ ಪಾವಕಂ ದೀಪ್ಯ ಮಾನಂ ||
*ಯಾನಂವಾ ವಿಪ್ರಯುಗ್ಮಂ |ಹಯಗಜ ವೃಷಭಾನ್*ಪೂರ್ಣ ಕಂಭದ್ವಯಂಚ ||
ಪೂರ್ಣಂ ಮಧ್ಯೇನ ಕುಂಭಂ ಜಲಚರಯುಗಳಂ| ಸಿದ್ಧಮನ್ನಂ ಶವಂವಾ
*ವೇಶ್ಯಾಸ್ತ್ರಿಮಾಂಸಖಂಡಂ ಪ್ರಿಯಹಿತವಚನಂ ಮಂಗಳಂಪ್ರಸ್ಥಿತಾನಾ||
ಅರ್ಥ:
ಪ್ರಯಾಣ ಮಾಡುವ ಕಾಲದಲ್ಲಿ ಕನ್ಯೆಯರು ಆಕಳು,ಮಂಗಳ ವಾದ್ಯ, ಶಂಖ, ಮೊಸರು, ಗಡಿಗೆ, ಹಣ್ಣುಗಳು,ಹೂವು, ಉರಿಯುವ ಬೆಳಕು, ರಥ ಈರ್ವರು ಬ್ರಾಹ್ಮಣರು, ಕುದುರೆ, ಆನೆ,ಎತ್ತು,ನೀರು ತುಂಬಿದ ಕೊಡ, ಮದ್ಯ ತುಂಬಿದ ಕೊಡ, ಮೀನುಗಳು, ಅನ್ನ, ಶವ,ವೇಶ್ಯಾಸ್ತ್ರೀ ಮಾಂಸ ಮೊದಲಾದಗಳು ಎಡದಿಂದ ಬಲಕ್ಕೆ ಬರಲಿ,ಇಲ್ಲವೇ ಎದುರಿನಿಂದ ಬಲಕ್ಕೆ ಬರಲಿ ಶುಭಕರವು,ಶುಭವಾರ್ತೆ ಕೇಳುವುದು,ಮನಸ್ಸಿನಂತೆ ಕಾರ್ಯಗಳು ಕೈಗೂಡುವುವು ಮತ್ತು ಕಾಗೆ ಎಡದಿಂದ ಬಲಕ್ಕೆ ಹಾರಿ ಹೋದರೆ,ಅಂಗರಕ್ಷಕ, ಹರಿಣಿ, ನಾಯಿ, ಮುಂಗಲಿ ಬಲದಿಂದ ಎಡಕ್ಕೆ ಬದಲ್ಲಿ ಶುಭಕರವು. ಬೆಕ್ಕು. ನಾಯಿ, ಕಾಗೆ ಇವುಗಳು ಮಾಂಸ ಕಚ್ಚಿಕೊಂಡು ಯಾವ ಕಡೆಗೆ ಹೋದರೂ ಹೊರಟ ಕಾರ್ಯವು ಸಿದ್ಧಿಸುವುದು, ಕತ್ತೆಯು ಒದರುತ್ತ ಹೋದರೆ ಕಾರ್ಯ ಕಾರ್ಯ ಸಿದ್ಧಿಪ್ರದವು. ನಾಯಿ ಎತ್ತು ತಲೆ ಕೊಡುತ್ತಾ ಹೋದರೆ ಶುಭವು ಹುಲ್ಲು ಸೊಪ್ಪು ವಿಳ್ಯದೆಲೆ, ಹಸಿರು ತೊಪ್ಪಲು ಎದುರಿಗೆ ಬಂದರೆ ಶ್ರೇಷ್ಠವು ಎಡದಿಂದ ಬಲಕ್ಕೆ ಹೊತ್ತುಕೊಂಡು ಹೋದರೆ ಮಹಾಶ್ರೀಷ್ಠವು ಎತ್ತುಗಳ ಮೇಲೆ ನೊಗೆ ಹೇರಿಕೊಂಡು ಎದುರಾಗಿ ಬಂದರೆ ಉದ್ಯೋಗ ಪ್ರಾಪ್ತಿ. ಹೊರಡುವಾಗ ಕೈಯಲ್ಲಿಯ ವಸ್ತು ಜಾರಿ ಕೆಳಗೆ ಬಿದ್ದರೆ ಶುಭ.ಇರುವೆಗಳ ಸಾಲು, ಗೆದ್ದಲು,ಹಾವು, ಚೇಳು,ಕಪ್ಪೆ, ನರಿ, ಆಮೆ ಬಲದಿಂದ ಎಡಕ್ಕೆ ಹೋದರೆ ಶುಭವು.ಬುತ್ತಿ ಎದುರಿಗೆ ಬಂದರೆ ಅಥವಾ ದಾರಿಯಲ್ಲಿ ಪ್ರಯಾಣಿಕರಿಗೆ ಸಿಕ್ಕರೆ ಇಲ್ಲವೇ ಯಾರಾದರೂ ಬುತ್ತಿಯನ್ನು ಬಿಚ್ಚಿ ಉಣ್ಣುತ್ತಿದ್ದುದ್ದನ್ನು ಕಂಡರೆ ಮಹಾಶ್ರೀಷ್ಠವು.