ಮನೆ ರಾಜ್ಯ ಬೆಳಗಾವಿ: ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಕೆ

ಬೆಳಗಾವಿ: ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಕೆ

0

ಬೆಳಗಾವಿ(Belagavi):  ಪಶ್ಚಿಮ ಬಂಗಾಳದ ಪಂಜಿಪಾಡಾದಲ್ಲಿ ಸೋಮವಾರ ಮೃತಪಟ್ಟ ಚಿಕ್ಕೋಡಿಯ ಯೋಧನ ಪಾರ್ಥಿವ ಶರೀರವನ್ನು ಇಂದು ದೆಹಲಿ‌ಯಿಂದ ವಿಮಾನ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಯಿತು

ಚಿಕ್ಕೋಡಿ ತಾಲ್ಲೂಕಿನ ಯಡೂರವಾಡಿಯ ಯೋಧ ಸೂರ‌ಜ್‌ ಸುತಾರ ರಸ್ತೆ ಅಪಘಾತದಲ್ಲಿ ಸೋಮವಾರ ಮೃತಪಟ್ಟಿದ್ದರು.

ಯೋಧನ ಪಾರ್ಥಿವ ಶರೀರಕ್ಕೆ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಶ, ಎಸ್ಪಿ ಸಂಜೀವ್ ಪಾಟೀಲ ಗೌರವ ಸಲ್ಲಿಸಿದರು.

ನಂತರ ಪಾರ್ಥಿವ ಶರೀರವನ್ನು ಯಡೂರವಾಡಿಗೆ ತೆಗೆದುಕೊಂಡು ಹೋಗಲಾಯಿತು. ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದ್ದು, ಅದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ತಯಾರಿ ನಡೆದಿದೆ.

2012ರಲ್ಲಿ ಸೂರಜ್ ಬಿಎಸ್‌ಎಫ್‌ಗೆ ಸೇರಿದ್ದರು. ಈ ಯೋಧ ಪತ್ನಿ ಸಮೇತರಾಗಿ ಆಟೊದಲ್ಲಿ ಕೆಲಸದ ಸ್ಥಳಕ್ಕೆ ಹೋಗುತ್ತಿದ್ದರು. ಆಟೊದಿಂದ ಇಳಿಯುವ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಅದರ ಚಕ್ರಕ್ಕೆ ಸಿಲುಕಿ ಯೋಧ ಮೃತಪಟ್ಟಿದ್ದರು.