ಮನೆ ಅಪರಾಧ ಮದರಸಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದೈಹಿಕ ಹಲ್ಲೆ: ಆರೋಪಿ ಬಂಧನ

ಮದರಸಾದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದೈಹಿಕ ಹಲ್ಲೆ: ಆರೋಪಿ ಬಂಧನ

0

ಬೆಂಗಳೂರು: ಇಲ್ಲಿನ ಮದರಸಾವೊಂದರಲ್ಲಿ 11 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

Join Our Whatsapp Group

ಫೆಬ್ರುವರಿ 16 ರಂದು ಹೆಗಡೆ ನಗರದಲ್ಲಿ ನಡೆದ ಘಟನೆ ಮದರಸಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸಂತ್ರಸ್ತೆಯ ತಾಯಿ ಬುಧವಾರ ನೀಡಿದ ದೂರಿನಲ್ಲಿ, ತನ್ನ ಮಗಳನ್ನು ಮದರಸಾದಲ್ಲಿ ಐದನೇ ತರಗತಿಗೆ ಮತ್ತು ಅದರ ಹಾಸ್ಟೆಲ್‌ನಲ್ಲಿ 2024ರ ಜುಲೈನಲ್ಲಿ ಸೇರಿಸಲಾಯಿತು. ಕ್ಷುಲ್ಲಕ ವಿಚಾರಕ್ಕೆ ಮನಬಂದಂತೆ ಬಾಲಕಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಹಾಸ್ಟೆಲ್ ಉಸ್ತುವಾರಿಯ ಪುತ್ರ ಮೊಹಮ್ಮದ್ ಹಸನ್ ಆಗಾಗ ಹಾಸ್ಟೆಲ್‌ಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರುವರಿ 16 ರಂದು ಸಂಜೆ 4.30 ರ ಸುಮಾರಿಗೆ ಬಾಲಕಿಯನ್ನು ಕಚೇರಿಗೆ ಕರೆಸಲಾಗಿದೆ. ಈ ವೇಳೆ ಆಟವಾಡುವಾಗ ಅಕ್ಕಿಯನ್ನು ಕೆಳಗೆ ಸುರಿದು ಮತ್ತು ಇತರ ಹಾಸ್ಟೆಲ್ ಹುಡುಗಿಯರೊಂದಿಗೆ ಜಗಳವಾಡಿದ ಆರೋಪದ ಮೇಲೆ ಹಸನ್ ಬಾಲಕಿಗೆ ಥಳಿಸಿದ್ದಾನೆ. ಕೆಳಗೆ ಬಿದ್ದ ಬಾಲಕಿಗೆ ಒದ್ದಿದ್ದಾನೆ.

ಕೊತ್ತನೂರು ಪೊಲೀಸ್ ಠಾಣೆಯು ಬಾಲಾಪರಾಧ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.