ಮನೆ ಸುದ್ದಿ ಜಾಲ ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್

ಬೆಂಗಳೂರಿನ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್

0

ಬೆಂಗಳೂರು: ನಗರದ ಹಲವು ದೇಗುಲಗಳಲ್ಲಿ ಘಂಟಾನಾದಕ್ಕೆ ನಿರ್ಬಂಧ ವಿಧಿಸಿ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.

ದೊಡ್ಡ ಗಣಪತಿ ದೇವಸ್ಥಾನ, ಮಿಂಟೋ ಆಂಜನೇಯ ದೇಗುಲ, ಕಾರಂಜಿ ಆಂಜನೇಯಸ್ವಾಮಿ, ದೊಡ್ಡ ಬಸವಣ್ಣ ದೇವಸ್ಥಾನ, ಮಲ್ಲಿಕಾರ್ಜುನಸ್ವಾಮಿ ಸೇರಿ ಹಲವು ದೇಗುಲಗಳಿಗೆ ನೋಟಿಸ್ ನೀಡಲಾಗಿದೆ.

ದೇವಸ್ಥಾನದ ಮಹಾ ಮಂಗಳಾರತಿ, ಅಭಿಷೇಕದ ಸಂದರ್ಭದಲ್ಲಿ ದೇವಸ್ಥಾನದ ಘಂಟೆ, ಡಮರುಗ, ಧ್ವನಿ ವರ್ಧಕ ಬಳಕೆಗೆ ನಿಗದಿತ ಡೆಸಿಬಲ್ಗಿಂತ ಮೀರಬಾರದು. ಘಂಟೆ ಬಾರಿಸುವ ಸಂದರ್ಭದಲ್ಲೂ ನಿಗದಿತ ಡೆಸಿಬಲ್ ಗಿಂತ ಕಡಿಮೆ ಶಬ್ದ ಬಳಕೆ ಆಗಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಹಿಂದಿನ ಲೇಖನಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಲವರ್ಧನೆಗೆ ಸರ್ವ ಕ್ರಮ :ಹೆಚ್ ಡಿಕೆ
ಮುಂದಿನ ಲೇಖನಮಸೀದಿ ಹಾಗೂ ದರ್ಗಾದಲ್ಲೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿ ವರ್ಧಕ ನಿಷೇಧ