ಬೆಂಗಳೂರು: ಅನೇಕ ವರ್ಷಗಳಿಂದ ಕಾದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಹೆಮ್ಮೆಯ ಕ್ಷಣ. 18 ವರ್ಷಗಳ ಕನಸು ನನಸಾದ ಬೆನ್ನಲ್ಲೇ ಇಂದು ಸಂಜೆ ಬೆಂಗಳೂರಿನಲ್ಲಿ ಆರ್‌ಸಿಬಿಯ ವಿಜಯೋತ್ಸವ ಮೆರವಣಿಗೆ ನಡೆಯಲಿದೆ.
ಆರ್‌ಸಿಬಿ ಅಧಿಕೃತವಾಗಿ ಈ ವಿಷಯವನ್ನು ಘೋಷಿಸಿದ್ದು, ಮೆರವಣಿಗೆ ಮಧ್ಯಾಹ್ನ 3:30ಕ್ಕೆ ವಿಧಾನಸೌಧದಿಂದ ಪ್ರಾರಂಭವಾಗಲಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಅಂತ್ಯವಾಗಲಿದೆ.
ಆರ್‌ಸಿಬಿ ಈ ಸಂತೋಷದ ಕ್ಷಣವನ್ನು ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಿದ್ದು, ಅಭಿಮಾನಿಗಳನ್ನು ‘12ನೇ ಸೇನೆ’ ಎಂದು ಕರೆಯುತ್ತಾ, “ಈ ಕಿರೀಟ ನಿಮ್ಮದೇ” ಎಂಬ ಸಂದೇಶವನ್ನು ನೀಡಿದೆ.
ಈ ಬಗ್ಗೆ ಶೀಘ್ರವೇ ಮತ್ತಷ್ಟು ಮಾಹಿತಿಯನ್ನು ನೀಡಲಾಗುವುದು ಎಂದು ಆರ್‌ಸಿಬಿ ತಿಳಿಸಿದೆ.















