ಮನೆ ರಾಜ್ಯ ಭಗವದ್ಗೀತೆ ಜೀವನಕ್ಕೆ ಹಿಡಿದ ಕೈಗನ್ನಡಿ: ಡಾ.ರಾಘವೇಂದ್ರ ಪೈ

ಭಗವದ್ಗೀತೆ ಜೀವನಕ್ಕೆ ಹಿಡಿದ ಕೈಗನ್ನಡಿ: ಡಾ.ರಾಘವೇಂದ್ರ ಪೈ

0

ಮೈಸೂರು(Mysuru): ವಾಸ್ತವವಾಗಿ ಭಗವದ್ಗೀತೆಯು ಜೀವನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮನುಷ್ಯನ ಚಂಚಲ ಮನಸ್ಸನ್ನು ನಿಯಂತ್ರಿಸಲು ಗೀತೆ ಸಹಕಾರಿಯಾಗಲಿದೆ ಎಂದು ಯೋಗ ತರಬೇತುದಾರ ಡಾ.ರಾಘವೇಂದ್ರ ಪೈ ತಿಳಿಸಿದರು.

ಬೋಗಾದಿ 2ನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಬುಧವಾರ ನಡೆದ ‘ಜೀವನಕ್ಕಾಗಿ ಗೀತೆ’ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಭಗವದ್ಗೀತೆಯು ಉತ್ತಮ ಗುಣಗಳನ್ನು ಕಲಿಸುವ ಜೊತೆಗೆ ಜೀವನದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮಾರ್ಗವನ್ನು ಒಳಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ದಕ್ಷಿಣ ಆಫ್ರಿಕಾದ ಪೀಟರ್‌ಮಾರಿಟ್ಸ್‌’ಬರ್ಗ್‌’ನ ಅಂತರರಾಷ್ಟ್ರೀಯ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಡಾ.ಮುರಳೀಧರ್ ಪಾಂಡ ಮಾತನಾಡಿ, ಮಾನವನ ಜೀವನಕ್ಕೆ ಅಗತ್ಯವಿರುವ ಎಲ್ಲ ವಿಷಯಗಳನ್ನೂ ಒಳಗೊಂಡಿರುವ ಗೀತೆಯನ್ನು ಶಾಲಾ-ಕಾಲೇಜುಗಳ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಲ್ಲವೇಕೆ? ಎಂದು ಕೇಳಿದರು.

ಭಗವದ್ಗೀತೆಯು ನಮಗೆ ಆತ್ಮಜ್ಞಾನವನ್ನು ನೀಡುವ ಜಗತ್ತಿನ ಅತ್ಯುತ್ತಮ ಗ್ರಂಥವಾಗಿದ್ದು, ಅದು ಧರ್ಮವನ್ನು ಮೀರಿದ್ದು. ಭಾರತವನ್ನು ವಿಶ್ವಕ್ಕೆ ಸಾರ್ವತ್ರಿಕ ಮಾರ್ಗದರ್ಶಿಯನ್ನಾಗಿ ಮಾಡುವುದು ನಮ್ಮ ಗುರಿಯಾಗಬೇಕು ಎಂದರು.

ಗೀತೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ತಯಾರಿಸಿದ 450ಕ್ಕೂ ಹೆಚ್ಚು ಭಿತ್ತಿಚಿತ್ರಗಳ ಪ್ರದರ್ಶನವನ್ನು ರಾಘವೇಂದ್ರ ಪೈ ಉದ್ಘಾಟಿಸಿದರು.

ಈ ಪ್ರದರ್ಶನವು ಡಿ.24ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿದೆ.

ಅಮೃತ ವಿದ್ಯಾಲಯದ ನಿರ್ದೇಶಕ ಅನಂತಾನಂದ ಚೈತನ್ಯ, ಸಂಚಾಲಕ ಮುಕ್ತಿದಾಮೃತ ಚೈತನ್ಯ, ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್, ಡಾ.ರೇಖಾ ಭಟ್, ಡಾ.ವಿಘ್ನೇಶ್ವರ ಭಟ್, ಡಾ.ಶ್ರೀಕಾಂತ ಪರಿಡ ಇದ್ದರು.

ಹಿಂದಿನ ಲೇಖನಕಾಮೆಡ್‌–ಕೆ ವತಿಯಿಂದ ಇನ್ನೋವೇಶನ್ ಹಬ್’ಉದ್ಘಾಟನೆ
ಮುಂದಿನ ಲೇಖನದೇವ ಮಾದೇವ ಬಾರೋ