ಮನೆ ಮನರಂಜನೆ ನಟ ಮೋಹನ್​ ಜುನೇಜ​ ನಿಧನ

ನಟ ಮೋಹನ್​ ಜುನೇಜ​ ನಿಧನ

0

ಬೆಂಗಳೂರು(Bengaluru): ಕನ್ನಡ ಚಿತ್ರರಂಗದ ಖ್ಯಾತ ನಟ ಮೋಹನ್​ ಜುನೇಜ​ ಅವರು ಅನಾರೋಗ್ಯದಿಂದಾಗಿ ತಡ ರಾತ್ರಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಆಪ್ತರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

150ಕ್ಕೂ ಸಿನಿಮಾಗಳಿಗೂ ಹೆಚ್ಚು ಅಭಿನಯಿಸಿರುವ ಮೋಹನ್​ ಜುನೇಜ ಅವರು ಹಾಸ್ಯ ಪಾತ್ರಗಳ ಮೂಲಕ ಫೇಮಸ್​ ಆಗಿದ್ದರು. ಕೆಜಿಎಫ್​ ಚಾಪ್ಟರ್​ 1 ಮತ್ತು ಕೆಜಿಎಫ್​ ಚಾಪ್ಟರ್-2​ ಸಿನಿಮಾದಲ್ಲೂ ನಟಿಸುವ ಮೂಲಕ ಜನಮನ ಗೆದ್ದಿದ್ದರು.

ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ್​ ಜುನೇಜ ಅವರು ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಅನೇಕ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಚಿಕ್ಕಬಾಣಾವರದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ತಡರಾತ್ರಿ ನಿಧನರಾಗಿದ್ದಾರೆ.

ತಮ್ಮೇನಹಳ್ಳಿಯ ಸ್ಮಶಾನದಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಹಿಂದಿನ ಲೇಖನಭಾರತ–ಚೀನಾ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಲಾಗಿದೆ: ಲೆ.ಜನರಲ್ ಉಪೇಂದ್ರ ದ್ವಿವೇದಿ
ಮುಂದಿನ ಲೇಖನಹೈಕಮಾಂಡ್ ನಿರ್ಧಾರಕ್ಕೆ ಬದ್ದ: ಬಿಎಸ್ ವೈ