ಮನೆ ಸುದ್ದಿ ಜಾಲ ಆಜಾನ್ ಗೆ ಪ್ರತಿರೋಧವಾಗಿ ಆಂಜನೇಯ ದೇವಾಲಯದಲ್ಲಿ ಸುಪ್ರಭಾತ

ಆಜಾನ್ ಗೆ ಪ್ರತಿರೋಧವಾಗಿ ಆಂಜನೇಯ ದೇವಾಲಯದಲ್ಲಿ ಸುಪ್ರಭಾತ

0

ಮೈಸೂರು(Mysuru): ಆಜಾನ್‌ಗೆ ಪ್ರತಿರೋಧವಾಗಿ ನಗರದ ಶಿವರಾಂಪೇಟೆಯ ಆಂಜನೇಯ ಸ್ವಾಮಿ ದೇಗುಲದಲ್ಲಿ ಪ್ರಮೋದ್‌ ಮುತಾಲಿಕ್‌ ನೇತೃತ್ವದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಸೋಮವಾರ ನಸುಕಿನ 5 ಗಂಟೆಯಿಂದ ಸುಮಾರು ಒಂದು ಗಂಟೆ ಕಾಲ ಶ್ರೀರಾಮ, ಶಿವನ ಭಜನೆ ಮಾಡಿ, ಹನುಮಾನ್‌ ಚಾಲೀಸಾ ಪಠಿಸಿದರು.

ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತೆ ನೀಡಿದ್ದರು.

ಸಾವಿರಕ್ಕೂ ಹೆಚ್ಚು ದೇಗುಲಗಳಲ್ಲಿ ಸುಪ್ರಭಾತ ಮೊಳಗಿಸುವುದಾಗಿ ಹೇಳಿದ್ದೆವು. ಮೈಸೂರಲ್ಲಿ ಆಂದೋಲನ ಆರಂಭವಾಗಿದ್ದು, ರಾಜ್ಯ ಸರ್ಕಾರ ಹಾಗೂ ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ನೀಡುವಲ್ಲಿ 100ರಷ್ಟು ಯಶಸ್ವಿಯಾಗಿದ್ದೇವೆ  ಎಂದು ಪ್ರಮೋದ್‌ ಮುತಾಲಿಕ್‌ ತಿಳಿಸಿದರು.

ಮಸೀದಿಗಳ ಮೇಲೆ ಲೌಡ್‌ ಸ್ಪೀಕರ್‌ ಹಾಕಿ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದಿಲ್ಲವೋ, ಎಲ್ಲಿಯವರೆಗೆ ಮುಸ್ಲಿಂ ಸಮುದಾಯ ಶಬ್ದಮಾಲಿನ್ಯ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

‘ಉಲ್ಲಂಘನೆ ಮಾಡುತ್ತಿರುವ ಮುಸ್ಲಿಮರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ, ದೇಗುಲಗಳಿಗೆ ನೋಟಿಸ್‌ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದೆಯೇ? ನಮ್ಮ ಮೇಲೇಕೆ ನಿಮ್ಮ ಆಕ್ರೋಶ? ದೇಗುಲಗಳಲ್ಲಿ ಭಕ್ತಿಗೀತೆ ಹಾಕುವ, ಪೂಜೆ ಮಾಡುವವರನ್ನು ಬಂಧಿಸುತ್ತೀರಾ? ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. ಹಿಂದೂ ಸಂಸ್ಕೃತಿ, ಹಿಂದೂ ವಿಚಾರಧಾರೆಯಲ್ಲಿ ಸರ್ಕಾರ ರಚಿಸಿ ಈಗ ನಮಗೇ ನೋಟಿಸ್‌ ನೀಡುತ್ತೀರಾ’ ಎಂದು ಪ್ರಶ್ನಿಸಿದರು.

ಹಿಂದಿನ ಲೇಖನಐಟಿ ನಿಯಮಗಳ ಸವಾಲು: ಕೇಂದ್ರ ಸರ್ಕಾರದ ಮನವಿ ಮೇರೆಗೆ ಹೈಕೋರ್ಟ್ ವಿಚಾರಣೆ ತಡೆ ಹಿಡಿದ ಸುಪ್ರೀಂ
ಮುಂದಿನ ಲೇಖನತಡರಾತ್ರಿವರೆಗೆ ರೇವ್ ಪಾರ್ಟಿ:  31 ಜನರ ಬಂಧನ