ಮನೆ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಭಾರತ್ ಜೋಡೋ ಯಾತ್ರೆ:  ಸಿಎಂ ಬೊಮ್ಮಾಯಿ

ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಭಾರತ್ ಜೋಡೋ ಯಾತ್ರೆ:  ಸಿಎಂ ಬೊಮ್ಮಾಯಿ

0

ರಾಯಚೂರು(Raichuru): ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ರಾಯಚೂರಿನಲ್ಲಿ ಬಿಜೆಪಿ ಸಂಕಲ್ಪಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೈ ನಾಯಕರು ಏನು ಮಾಡುತ್ತಿದ್ದಾರೂ ಗೊತ್ತಿಲ್ಲ ನಾವು ಸೋಲುವ ಭೀತಿಯಿಂದ ಯಾತ್ರೆ ಮಾಡುತ್ತಿಲ್ಲ ಕಾಂಗ್ರೆಸ್ ಗೆ ಸೋಲಿನ ಭೀತಿ ಇದೆ. ರಾಹುಲ್ ಗಾಂಧಿ ಅಸ್ತಿತ್ವ ಕಳೆದುಕೊಂಡಿದ್ದಾರೆ ಆ ಭೀತಿಯಿಂದ ಯಾತ್ರೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಯಚೂರಿನಿಂದ ಜನಸಂಕಲ್ಪ ಯಾತ್ರೆ ಆರಂಭವಾಗಿದೆ.  50ಕ್ಕೂ ಹೆಚ್ಚು ಕಡೆಗಳಲ್ಲಿ ಜನಸಂಕಲ್ಪಯಾತ್ರೆ ನಡೆಯಲಿದೆ.   ಸರ್ಕಾರದ ಕೆಲಸವನ್ನುಜನರ ಮುಂದಿಡುತ್ತೇವೆ. ಮುಂಬರುವ ಚುನಾವಣೆಗೆ ಜನಾದೇಶ ಪಡೆಯುತ್ತೇವೆ. ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಸ್ ಸಿ ಮತ್ತು ಎಸ್.ಟಿ  ಮೀಸಲಾತಿ ಹೆಚ್ಚಳ ವಿಚಾರ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ,  ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿಲ್ಲ ಅನೇಕ ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕೆ  ಬೇಡಿಕೆ ಇತ್ತು. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹಿಂದಿನ ಲೇಖನಮೆಕ್ಕೆಜೋಳ ಸೇವಿಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನ
ಮುಂದಿನ ಲೇಖನಕೊಲೆ ಮಾಡಿ ಶವ  ಬಿಸಾಕಲು ಬಂದಾಗ ಉರುಳಿಬಿದ್ದ ಕಾರು: ಆರೋಪಿಗಳು ಪೊಲೀಸರ ವಶಕ್ಕೆ